ಬದಿಯಡ್ಕ: ಜಿಲ್ಲಾ ಹಾಗೂ ತಾಲೂಕು ಲೀಗಲ್ ಸರ್ವೀಸಸ್ ಅಥೋರಿಟಿ ಕಾಸರಗೋಡು, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಟ್ರೈಬಲ್ ಡೆವಲಪ್‍ಮೆಂಟ್ ಕಚೇರಿ ಕಾಸರಗೋಡು ಹಾಗೂ ಬದಿಯಡ್ಕ ಗ್ರಾಮಪಂಚಾಯಿತಿ ಜಂಟಿ ಆಶ್ರಯದಲ್ಲಿ `ಸಂವಾದ್' ಉದ್ಯೋಗ ನೊಂದಾವಣೆ ಮತ್ತು ರಿನೀವಲ್ ಹಾಗೂ ಮಾಹಿತಿ ಶಿಬಿರ ಬದಿಯಡ್ಕ ಸಂಸ್ಕøತಿ ಭವನದಲ್ಲಿ ಗುರುವಾರ ಜರಗಿತು. ಅಭಿವೃದ್ಧಿ ಸ್ಥಾಯಿಸಮಿತಿ ಅಧ್ಯಕ್ಷ ಹಮೀದ್ ಕೆಡೆಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿ ಅನಿಲ್ ಕುಮಾರ್ ಎ. ಅಧ್ಯಕ್ಷತೆ ವಹಿಸಿದ್ದರು. ಕ್ಷೇಮಕಾರ್ಯ ಸ್ಥಾಯಿಸಮಿತಿ ಅಧ್ಯಕ್ಷೆ ರಜನಿ ಜಿ.ಆರ್., ಗ್ರಾಮಪಂಚಾಯಿತಿ ಸದಸ್ಯರುಗಳಾದ ಶ್ಯಾಮಪ್ರಸಾದ ಸರಳಿ, ಶಾಹಿನಾ ಅನ್ವರ್, ಫಾತಿಮತ್ ಫೌಸಿಯಾ, ಎಣ್ಮಕಜೆ ಟ್ರೈಬಲ್ ವಿಭಾಗದ ಅಧಿಕಾರಿ ವೀಣಾ ನಾರಾಯಣನ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಕಾರ್ಯಕ್ರಮ ಸಂಯೋಜಕಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕೃಷ್ಣವೇಣಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬದಿಯಡ್ಕ ಗ್ರಾಮಪಂಚಾಯಿತಿ ಎಸ್.ಟಿ.ಪ್ರೋಮೋಟರ್ ೀಕ್ಷಿತ್ ಸಿ.ಎಚ್. ಸ್ವಾಗತಿಸಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಗುಣವತಿ ವಂದಿಸಿದರು. ನೂರರಷ್ಟು ಮಂದಿ ಉದ್ಯೋಗ ನೊಂದಾವಣಾ ಶಿಬಿರದಲ್ಲಿ ಪಾಲ್ಗೊಂಡಿದ್ದರು.

.jpg)
