ಬದಿಯಡ್ಕ: ಕರ್ತವ್ಯದ ಮಧ್ಯೆ ಬಿದ್ದು ಸಿಕ್ಕಿದ ಹಣವನ್ನು ಪೆÇಲೀಸ್ ಠಾಣೆಗೆ ಒಪ್ಪಿಸಿ ಆದರ್ಶ ಮೆರೆದ ಹಸಿರು ಕ್ರಿಯಾಸೇನಾ ಕಾರ್ಯಕರ್ತೆಯರನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರ ನೇತೃತ್ವದಲ್ಲಿ ಗೌರವಿಸಲಾಯಿತು.
ಬದಿಯಡ್ಕ ಗ್ರಾಮ ಪಂಚಾಯಿತಿ 5 ನೇ ಮೂಕಂಪಾರೆ ವಾರ್ಡಿನ ಹಸಿರು ಕ್ರಿಯಾಸೇನೆಯ ಕಾರ್ಯಕರ್ತೆಯರಾದ ಸತ್ಯಪ್ರೇಮ, ರೇಖ ಎಂಬವರಿಗೆ ಮೂಕಂಪಾರೆ ಶ್ರೀರಾಮ ಮಂದಿರ ಬಳಿಯಿಂದ ಹಣ ಬಿದ್ದು ಸಿಕ್ಕಿತ್ತು. ಈ ಹಣವನ್ನು ಅವರು ಕೂಡಲೇ ಬದಿಯಡ್ಕ ಪೋಲೀಸರಿಗೆ ಒಪ್ಪಿಸಿ ಆದರ್ಶ ಮೆರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ ಡಿ.ಅವರು ಶಾಲು ಹೊದಿಸಿ ಅಭಿನಂದಿಸಿದರು. ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಅಶ್ವಿನಿ.ಕೆ.ಎಂ, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಹಮೀದ್ ಕೆಡೆಂಜಿ, ರಜನಿ ಸಂದೀಪ್, ಅವಿನಾಶ್.ವಿ.ರೈ, ಸದಸ್ಯರುಗಳಾದ ಬಾಲಕೃಷ್ಣ ಶೆಟ್ಟಿ, ಉಷ ಪಳ್ಳತ್ತಡ್ಕ, ಶ್ಯಾಮ ಪ್ರಸಾದ್ ಸರಳಿ ಮೊದಲಾದವರು ಈ ಸಂದರ್ಭದಲ್ಲಿ ಜೊತೆಗಿದ್ದರು.

.jpg)
