ಕಾಸರಗೋಡು: ಅಧ್ಯಾಪಕ ವೃತ್ತಿಗೆ ಸೂಕ್ತ ಸಂರಕ್ಷಣೆ ನೀಡಿದಾಗ ಮಾತ್ರ ಶಿಕ್ಷಣ ವಲಯದ ಪುರೋಗತಿ ಸಾಧ್ಯ ಎಂಬುದಾಗಿ ಬಿಜೆಪಿ ರಆಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಟಿ ರಮೇಶ್ ತಿಳಿಸಿದ್ದಾರೆ.
ಅವರು ಕಾಸರಗೋಡು ನಗರಸಭಾಂಗಣದ'ಜಯಕೃಷ್ಣನ್ ಮಾಸ್ಟರ್ ನಗರ'ದಲ್ಲಿ ರಾಷ್ಟ್ರೀಯ ಅಧ್ಯಾಪಕ ಪರಿಷತ್(ಎನ್‍ಟಿಯು)47ನೇ ಕೇರಳ ರಾಜ್ಯ ಸಮ್ಮೇಳನದ ಔಪಚಾರಿಕ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕೇರಳದಲ್ಲಿ ಎಡ ಮತ್ತು ಐಕ್ಯರಂಗ, ಶಿಕ್ಷಣ ಕ್ಷೇತ್ರವನ್ನು ಮತೀಯ ಸಂಘಟನೆಗಳಿಗೆ ಧಾರೆ ಎರೆಎರೆಯುತ್ತಿದೆ. ಶಿಕ್ಷಣ ವಲಯದಲ್ಲಿ ಒಂದು ಸಮುದಾಯದ ಒತ್ತಡಕ್ಕೆ ಮಣಿದು ಹಲವು ತಿದ್ದುಪಡಿಗಳನ್ನು ತರಲಾಗಿದ್ದು, ಇಂತಹ ಸಂಘಟನೆಗಳಿಗೆ ಬೇಕಾದಂತೆ ಕಾನೂನನ್ನು ಜಾರಿಗೊಳಿಸಲಗುತ್ತಿದೆ. ಶಿಕ್ಷಕ ವಲಯ ಇಂದು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಎನ್‍ಟಿಯು ಮಾತ್ರ ಸಮರ್ಥವಾಗಿದೆ. ಟೀಚರ್ಸ್ ಎಲಿಜಿಬಿಲಿಟಿ ಟೆಸ್ಟ್(ಟಿಇಟಿ)ನಂತಹ ಬಿಕ್ಕಟ್ಟಿನ ಸನ್ನಿವೇಶದಿಂದ ಪಾರುಮಾಡುವ ಸಂಘಟನೆಗಳ ಬಗ್ಗೆ ಅಧ್ಯಾಪಕ ವಲಯ ಇದಿರು ನೋಡುತ್ತಿದ್ದು, ಈ ಬಗ್ಗೆ ಎನ್‍ಟಿಯು ನಡೆಸುತ್ತಿರುವ ಪ್ರಯತ್ನಕ್ಕೆ ಬಿಜೆಪಿಯ ಪೂರ್ಣ ಬೆಂಬಲವಿರುವುದಾಗಿ ತಿಳಿಸಿದರು.
ದೇಶದಲ್ಲಿ ನಾನಾ ರಾಜ್ಯಗಳಲ್ಲಿ ಜಾರಿಯಾಗುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇರಳದಲ್ಲಿ ಎಡ ಮತ್ತು ಐಕ್ಯರಂಗ ಎರಡೂ ಜತೆಯಾಗಿ ಎದುರಿಸುತ್ತಿರುವುದರ ಹಿಂದೆ ಮತೀಯ ಸಂಘಟನೆಗಳ ಒತ್ತಡ ಕೆಲಸ ಮಾಡುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುವಲ್ಲಿ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‍ಗೆ ಇಲ್ಲದ ಸಮಸ್ಯೆ ಕೇರಳ ಕಾಂಗ್ರೆಸ್‍ಗೆ ಎದುರಾಗಲು ಮತೀಯಸಂಗಟನೆಗಳ ಒತ್ತಡ ತಂತ್ರ ಕಾರಣವಾಗಿದೆ ಎಂದು ಅವರು ದೂರಿದರು.
(ಕಾಸರಗೋಡು ನಗರಸಭಾಂಗಣದ'ಜಯಕೃಷ್ಣನ್ ಮಾಸ್ಟರ್ ನಗರ'ದಲ್ಲಿ ರಾಷ್ಟ್ರೀಯ ಅಧ್ಯಾಪಕ ಪರಿಷತ್(ಎನ್‍ಟಿಯು)47ನೇ ಕೇರಳ ರಾಜ್ಯ ಸಮ್ಮೇಳನದ ಔಪಚಾರಿಕ ಉದ್ಘಾಟನಾ ಸಮಾರಂಭದಲ್ಲಿ ಮಂಗಳೂರು ಸಂಸದ ಬ್ರಿಜೇಶ್ ಚೌಟ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.)ಈ ಸಂರ್ಭ ಸೇವೆಯಿಂದ ನಿವೃತ್ತರಾಗುವ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ, ವಿದ್ಯಾಭ್ಯಾಸ ಸಮ್ಮೇಳನ, ಗೊತ್ತುವಳಿ ಮಮಡನೆ, ಪದಾಧಿಕಾರಿಗಳ ಆಯ್ಕೆಗಾಗಿ ಚುನಾವಣೆ ನಡೆಯಿತು.

.jpg)


