ಕಾಸರಗೋಡು: ಯುವಕನನ್ನು ಹನಿಟ್ರ್ಯಾಪ್‍ಗೊಳಪಡಿಸಿ ಹಣ ಎಗರಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ 17ರ ಹರೆಯದ ಬಾಲಕಿ ಸೇರಿದಂತೆ ನಾಲ್ವರನ್ನು ಚಕ್ಕರಕ್ಕಲ್ ಠಾಣೆ ಪೊಲೀಸರುಬಂಧಿಸಿದ್ದಾರೆ. ಹೊಸದುರ್ಗ ನಿವಾಸಿಗಳಾದ 17ರ ಹರೆಯದ ಬಾಲಕಿ, ಇಬ್ರಾಹಿಂ ಸಜ್ಮಲ್ ಅರ್ಶಾದ್, ಮೈಮೂನಾ ಹಾಗೂ ಎ.ಕೆ ಅಬ್ದುಲ್ ಕಲಾಂ ಬಂಧಿತರು.
ಮೊಬೈಲ್ ಆಪ್ ಮೂಲಕ ಪರಿಚಯಗೊಂಡ ಚಕ್ಕರಕ್ಕಲ್ ಕೊಯ್ಯೋಡ್ ನಿವಾಸಿ ಯುವಕ ನಿಡಿದ ದೂರಿನ ಮೇರೆಗೆ ಇವರನ್ನುಬಂಧಿಸಲಾಗಿದೆ. ಮೊಬೈಲ್ ಆ್ಯಪ್ ಮೂಲಕಪರಿಚಯಗೊಂಡ ಬಾಲಕಿ, ತನ್ನನ್ನು ಹೊಸದುರ್ಗಕ್ಕೆ ಕರೆಸಿಕೊಂಡು, ಅಲ್ಲಿಂದ ಮನೆಯೊಂದಕ್ಕೆಕರೆದೊಯ್ದಿದ್ದಳು. ಅಲ್ಲಿ ಆಕೆ ತನ್ನ ಸಹಚರರನ್ನು ಕರೆಸಿ, ಆಕೆಯೊಮದಿಗೆ ಅರೆನಗ್ನ ಫೋಟೋ ತೆಗೆಸಿಕೊಂಡು, ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪ್ರಚರ ಮಾಡುವ ಬೆದರಿಕೆಯೊಡ್ಡಿ 10ಲಕ್ಷ ರೂ.ಗಾಗಿ ಬೇಡಿಕೆಯಿರಿಸಿದ್ದರು. ತನ್ನ ಕೈಯಲ್ಲಿ ಹಣವಿಲ್ಲ, ಊರಿಗೆ ತೆರಳಿದ ನಂತರ ನೀಡುವುದಾಗಿ ತಿಳಿಸಿ ಅಲ್ಲಿಂದ ಹೊರಬಂದಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ನಂತರ ಹಣಕ್ಕಾಗಿ ಚಕ್ಕರಕ್ಕಲ್‍ಗೆ ಆಗಮಿಸಿದ ನಾಲ್ಕೂ ಮಂದಿಯನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ.

