ಕಾಸರಗೋಡು: ಲೈಂಗಿಕ ಕಿರುಕುಳದಿಂದ 13ಹಾಗೂ17ರ ಹರೆಯದ ಇಬ್ಬರು ಬಾಲಕಿಯರು ಗರ್ಭಿಣಿಯರಾಗಿರುವ ಎರಡುಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿ ರಾಜಾಪುರಂ ಹಾಗೂ ನೀಲೇಶ್ವರ ಠಾಣೆ ಪೊಲೀಸರು ಪೋಕ್ಸೋ ಅನ್ವಯ ಕೇಸು ದಾಖಲಿಸಿಕೊಂಡಿದ್ದು, ಇವರಲ್ಲಿ ಒಬ್ಬನನ್ನು ರಾಜಾಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಜಾಪುರಂ ಠಾಣೆ ಪೊಲೀಸರು ದಕಲಿಸಿಕೊಂಡಿರುವ ಪೋಕ್ಸೋ ಪ್ರಕರಣದಲ್ಲಿ ಕರ್ನಾಟಕದ 13ರ ಹರೆಯದ ಬಾಲಕಿಗೆ ವಿವಾಹ ಭರವಸೆ ನೀಡಿ ಲೈಂಗಿಕ ಕಿರುಕುಳ ನೀಡಿ ಗರ್ಭಿಣಿಯನ್ನಾಗಿಸಿದ ಕರ್ನಾಟಕ ನಿವಾಸಿ ಸಿದ್ಧಾರ್ಥ ಎಂಬಾತನನ್ನು ಬಂಧಿಸಿದ್ದಾರೆ. ಬಾಲಕಿ ಅಂಬಲತ್ತರ ಪೊಲೀಸ್ ಠಾಣೆ ವ್ಯಪ್ತಿಯಲ್ಲಿ ತಂದೆ-ತಾಯಿ ಜತೆ ವಾಸಿಸುತ್ತಿದ್ದು, ಈ ಮಧ್ಯೆ ಸಿದ್ಧಾರ್ಥನ ಪರಿಚಯವಾಗಿದೆ. ಈತ ವಿವಾಹದ ಭರವಸೆ ನೀಡಿ, ದೈಹಿಕ ಸಂಪರ್ಕ ಬೆಳೆಸಿದ ಪರಿಣಾಮ ಬಾಲಕಿ ಗರ್ಭಿಣಿಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಹೊಟ್ಟೆನೋವು ಕಾಣಿಸಿಕೊಮಡ ಹಿನ್ನೆಲೆಯಲ್ಲಿ ಬಾಲಕಿಯನ್ನು ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ಮಾಹಿತಿ ಬಹಿರಂಗಗೊಂಡಿದೆ. ಅಂಬಲತ್ತರದಲ್ಲಿ ಘಟನೆ ನಡೆದಿರುವ ಹಿನ್ನೆಲೆಯಲ್ಲಿ ಅಂಬಲತ್ತರ ಪೊಲೀಸ್ ಠಾಣೆಗೆ ಪ್ರಕರಣ ಹಸ್ತಾಂತರಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ 17ರ ಹರೆಯದ ಬಾಲಕಿಗೆ ವಿವಾಹ ಭರವಸೆಯೊಡ್ಡಿ ಲೈಂಗಿಕ ಕಿರುಕುಳ ನೀಡಿದ ತೆಂಗಿನ ಮರವೇರುವ ಕರ್ಮಿಕ, 19ರ ಹರೆಯದ ಯುವಕನ ವಿರುದ್ಧ ನೀಲೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕರ್ನಾಟಕ ನಿವಾಸಿಯಾಗಿರುವ ಬಾಲಕಿಯನ್ನು ಇನ್‍ಸ್ಟಾಗ್ರಾಮ್ ಮೂಲಕ ಪರಿಚಯ ಮಾಡಿಕೊಂಡ ಈತ ವಿವಾಹದ ಭರವವಸೆ ನಿಡಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಬಾಲಕಿಗೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಪಾಸಣೆ ನಡೆಸಿದಾಗ ಗರ್ಭಿಣಿಯಾಗಿರುವ ಮಾಹಿತಿ ಬಹಿರಂಗಗೊಂಡಿತ್ತು. ಆರೋಪಿ ತಲೆಮರೆಸಿಕೊಂಡಿದ್ದಾನೆ.

