ಕಾಸರಗೋಡು: ರಾಷ್ಟ್ರೀಯ ಮತ್ತು ಅಂಥರಾಷ್ಟ್ರೀಯ ಮಟ್ಟದಲ್ಲಿ ಕೇರಳದ ಭೌಗೋಳಿಕತೆ, ಇತಿಹಾಸ ಮತ್ತು ವರ್ತಮಾನದ ಕುರಿತು ಪ್ರಶ್ನೆಗಳನ್ನು ಚರ್ಚಿಸುವ ಮೂಲಕ ಮುಖ್ಯಮಂತ್ರಿಗಳ ಮೆಗಾ ರಸಪ್ರಶ್ನೆ ಸ್ಪರ್ಧೆ ಜಿಲ್ಲೆಯಲ್ಲಿ ಜರುಗಿತು.
ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದ್ದು, ಕಾಸರಗೋಡು ಮತ್ತು ಕಾಞಂಗಾಡು ಶಿಕ್ಷಣ ಜಿಲ್ಲಾ ಸ್ಪರ್ಧೆಗಳಲ್ಲಿ ನಡೆಸಲಾಯಿತು. ಸ್ಪರ್ಧೆಯಲ್ಲಿ ಕೃಷಿ, ಕೈಗಾರಿಕೆ, ಬ್ಯಾಂಕಿಂಗ್, ಕ್ರೀಡೆ ಮತ್ತು ಸಿನಿಮಾ ಸೇರಿದಂತೆ ಎಲ್ಲಾ ಕ್ಷೇತ್ರಗಳಿಂದ 30 ಪ್ರಶ್ನೆಗಳುಒಳಗೊಂಡಿತ್ತು.
ಕಾಸರಗೋಡು ಜಿಲ್ಲಾ ಶಿಕ್ಷಣ ಸ್ಪರ್ಧೆಯು ಚೆರ್ಕಳ ಮಾರ್ಥೋಮ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಿತು. 46 ಶಾಲೆಗಳಿಂದ 81 ತಂಡಗಳು ಮತ್ತು ಮೂರು ಶಾಲೆಗಳಿಂದ ಮೂರು ಪ್ರತಿನಿಧಿಗಳು ಸೇರಿದಂತೆ 165 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಮೊದಲ ಹತ್ತು ಸ್ಥಾನಗಳನ್ನು ಪಡೆದ ತಂಡಗಳನ್ನು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಯಿತು. ಕಾಸರಗೋಡು ಜಿಲ್ಲಾ ಪ್ರಭಾರ ಶಿಕ್ಷಣಾಧಿಕಾರಿ ಜಿ ಬಿಜಿಮೋನ್, ಜೂನಿಯರ್ ಸೂಪರಿಂಟೆಂಡೆಂಟ್ ದೀಪ್ತಿ, ಸೆಕ್ಷನ್ ಕ್ಲರ್ಕ್ ಎಂ.ರಜಿತಾ, ಜಿಲ್ಲಾ ಶಿಕ್ಷಣ ಕಚೇರಿ ನೌಕರರಾದ ಸಿ.ವಿ. ಜಸ್ನಾ ಮತ್ತು ಸಿ. ಸುಜಾತ ಅವರು ರಸಪ್ರಶ್ನೆ ಸ್ಪರ್ಧೆಗೆ ಮುನ್ನ ನಡೆದ ಸಮಾರಂಭದಲ್ಲಿ ಉಪಸ್ಥೀತರಿದ್ದರು. ಕಾಸರಗೋಡು ಸರ್ಕಾರಿ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಸಿ.ಕೆ. ಮದನನ್ ಮಲಯಾಳಂ ವಿಭಾಗದಲ್ಲಿ ರಸಪ್ರಶ್ನೆ ಸ್ಪರ್ಧೆಯನ್ನು ಮತ್ತು ಬೆಳ್ಳೂರು ಶಾಲೆಯ ಶಿಕ್ಷಕಿ ಕೆ. ಸುಮಿತ್ರಾ ಕನ್ನಡ ವಿಭಾಗದಲ್ಲಿ ರಸಪ್ರಶ್ನೆ ಸ್ಪರ್ಧೆಯನ್ನು ನಿರ್ವಹಿಸಿದರು. ಇರಿಯನ್ನಿ ಜಿ ವಿ ಎಚ್ ಎಸ್ ಶಿಕ್ಷಕ ಕೆ. ಮಿನಿಯೇಶ್ ಬಾಬು ಸ್ವಾಗತಿಸಿದರು.
ಸ್ಪರ್ಧೆಯಲ್ಲಿ ಮೊದಲ ಹತ್ತು ಸ್ಥಾನಗಳನ್ನು ಪಡೆದ ಚೆಮ್ಮನಾಡ್ ಜಿಎಚ್‍ಎಸ್ ಮತ್ತು ಇರಿಯಣ್ಣಿ ಜಿವಿಎಚ್‍ಎಸ್ ಶಾಲೆಗಳಿಂದ ತಲಾ ಎರಡು ತಂಡಗಳು ಮತ್ತು ಎಸ್‍ಎಟಿ ಮಂಜೇಶ್ವರ, ಕುಂಡಂಕುಳಿ ಜಿಎಚ್‍ಎಸ್‍ಎಸ್, ಬೇತೂರ್‍ಪಾರ ಜಿಎಚ್‍ಎಸ್, ಕಾರಡ್ಕ ಜಿಎಚ್‍ಎಸ್‍ಎಸ್, ಮುನ್ನಾಡ್ ಜಿಎಚ್‍ಎಸ್ ಮತ್ತು ಬೋವಿಕ್ಕಾನ ಜಿಎಚ್‍ಎಸ್ ತಂಡಗಳನ್ನು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಯಿತು.


