ತಿರುವನಂತಪುರಂ: ಡಿಆರ್‍ಡಿಒ (ಏರೋನಾಟಿಕಲ್ ಸಿಸ್ಟಮ್ಸ್) ಮಾಜಿ ಮಹಾನಿರ್ದೇಶಕಿ ಡಾ. ಟೆಸ್ಸಿ ಥಾಮಸ್ ಅವರನ್ನು 2024 ರ ಕೇರಳ ವಿಜ್ಞಾನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಭಾರತದ ಕ್ಷಿಪಣಿ ಮಹಿಳೆ ಎಂದು ಕರೆಯಲ್ಪಡುವ ಡಿಆರ್‍ಡಿಒ ವಿಜ್ಞಾನಿ ಡಾ. ಟೆಸ್ಸಿ ಥಾಮಸ್ ಅವರನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಳನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಫೆಬ್ರವರಿ 1 ರಂದು ಎರ್ನಾಕುಲಂನ ಸೇಂಟ್ ಆಲ್ಬಟ್ರ್ಸ್ ಕಾಲೇಜಿನಲ್ಲಿ ಆಯೋಜಿಸಲಾಗುವ ಕೇರಳ ವಿಜ್ಞಾನ ಕಾಂಗ್ರೆಸ್‍ನ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.ಕೇರಳ ವಿಜ್ಞಾನ ಪ್ರಶಸ್ತಿಯು 2 ಲಕ್ಷ ರೂ. ನಗದು ಬಹುಮಾನ, ಪ್ರಶಂಸಾಪತ್ರ ಮತ್ತು ಕನಯಿ ಕುಂಞÂ ರಾಮನ್ ವಿನ್ಯಾಸಗೊಳಿಸಿದ ಫಲಕ ಹೊಂದಿದೆ.
ಕ್ಷಿಪಣಿ ಯೋಜನೆಯನ್ನು ಮುನ್ನಡೆಸಿದ ಭಾರತದ ಮೊದಲ ಮಹಿಳೆ ಟೆಸ್ಸಿ ಥಾಮಸ್. ಅವರು ಅಗ್ನಿ-ವಿ ಖಂಡಾಂತರ ಕ್ಷಿಪಣಿಯ ಮುಖ್ಯ ವಾಸ್ತುಶಿಲ್ಪಿ ಮತ್ತು ಯೋಜನಾ ವ್ಯವಸ್ಥಾಪಕಿ. ಅವರು ಅತ್ಯಂತ ಕಿರಿಯ ವ್ಯಕ್ತಿ, ಮೊದಲ ಕೇರಳೀಯೆ ಮತ್ತು ಭಾರತದ ಮಾರ್ಗದರ್ಶಿ ಕ್ಷಿಪಣಿ ಅಭಿವೃದ್ಧಿ ಕಾರ್ಯಕ್ರಮದ ನಿರ್ದೇಶಕಿಯಾಗಿ ನೇಮಕಗೊಂಡ ಮೊದಲ ಮಹಿಳೆ.
ರಕ್ಷಣಾ ಸಂಶೋಧನೆ ಮತ್ತು ಭಾರತದ ಕ್ಷಿಪಣಿ ಅಭಿವೃದ್ಧಿ ಕ್ಷೇತ್ರದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿರುವ ಡಾ. ಟೆಸ್ಸಿ ಥಾಮಸ್ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅವರ ಅತ್ಯುತ್ತಮ ಕೊಡುಗೆಗಳ ಆಧಾರದ ಮೇಲೆ ಅತ್ಯುತ್ತಮ ವಿಜ್ಞಾನಿಗಳನ್ನು ಪೆÇ್ರೀತ್ಸಾಹಿಸಲು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಕೇರಳ ರಾಜ್ಯ ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರ ಮಂಡಳಿ ಜಂಟಿಯಾಗಿ ಪ್ರಾರಂಭಿಸಿದ ಅತ್ಯುನ್ನತ ಮನ್ನಣೆ ಕೇರಳ ವಿಜ್ಞಾನ ಪ್ರಶಸ್ತಿಯಾಗಿದೆ.
ಈ ಪ್ರಶಸ್ತಿಯನ್ನು ಕೇರಳದಲ್ಲಿ ಜನಿಸಿದ ಮತ್ತು ವಿಶ್ವದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ವಿಜ್ಞಾನಿಗಳಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯು ವಿಜ್ಞಾನಿಗಳ ಜೀವಮಾನದ ಸಾಧನೆಗಳು ಮತ್ತು ಕೊಡುಗೆಗಳನ್ನು ಪರಿಗಣಿಸುತ್ತದೆ.
ಏಪ್ರಿಲ್ 27, 1963 ರಂದು ಅಲಪ್ಪುಳದಲ್ಲಿ ಜನಿಸಿದ ಟೆಸ್ಸಿ ಥಾಮಸ್, ತ್ರಿಶೂರ್‍ನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‍ನಲ್ಲಿ ಬಿ.ಟೆಕ್ ಪದವಿ ಮತ್ತು ಪುಣೆಯ ಡಿಫೆನ್ಸ್ ಇನ್‍ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‍ಡ್ ಟೆಕ್ನಾಲಜಿಯಿಂದ ಎಂ.ಟೆಕ್ ಪದವಿಯನ್ನು ಪಡೆದಿದ್ದಾರೆ.
ಡಾ. ಟೆಸ್ಸಿ ಥಾಮಸ್ ಅವರ ಸಂಶೋಧನೆಯು ಭಾರತದ ರಕ್ಷಣಾ ತಂತ್ರಜ್ಞಾನ ಮತ್ತು ಕಾರ್ಯತಂತ್ರದ ಸಾಮಥ್ರ್ಯಗಳನ್ನು ಬಲಪಡಿಸಲು ಕೊಡುಗೆ ನೀಡುತ್ತದೆ.

