ಮಂಜೇಶ್ವರ: ಖ್ಯಾತ ಚುಟುಕು ಸಾಹಿತಿ, ಚುಟುಕು ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹಸು.ಒಡ್ಡಂಬೆಟ್ಟು ಅವರ ನ್ಯಾನೋ ಕತೆಗಳ ಸಂಕಲನ ಕೋಲ್ಮಿಂಚು ಭಾನುವಾರ ಕದ್ರಿ ದೇವಾಲಯದ ಅಭಿಷೇಕ ಕಲಾಮಂದಿರದಲ್ಲಿ ನಡೆದ ಸಾಹಿತ್ಯ ವೈಭವ 20026 ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಕೃತಿ ಲೋಕಾರ್ಪಣೆಗೊಳಿಸಿದರು. ಕರಾವಳಿ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಎಸ್. ಗಣೇಶ್ ರಾವ್ ಉದ್ಘಾಟಿಸಿದರು. ಚುಟುಕು ಸಾಹಿತ್ಯ ಪರಿಷತ್ತಿನ ಗೌರಾವದ್ಧಕ್ಷ ಇರಾ ನೇಮು ಪೂಜಾರಿ ಮತ್ತು ಮಂಗಳೂರು ತಾಲೂಕು ಅಧ್ಯಕ್ಷ ಗೋಪಾಲಕೃಷ್ಣರಿ ಶಾಸ್ತ್ರಿ ಉಪಸ್ಥಿತಿರಿದ್ದರು.

.jpg)
