ಕುಂಬಳೆ: ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರದ ರಜತ ವರ್ಷಾಚರಣೆಯ ರಜತರಂಗ ಸರಣಿ ಕಾರ್ಯಕ್ರಮದ 7 ನೇ ಕಾರ್ಯಕ್ರಮ ಇತ್ತೀಚೆಗೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ನಡೆಯಿತು. ಇದರಂಗವಾಗಿ ಕುಂಬಳೆ ಸುಂದರ ರಾವ್ ಸಂಸ್ಮರಣೆ ಮತ್ತು ಪಾಂಚಜನ್ಯ ಪ್ರಸಂಗದ ಯಕ್ಷಗಾನ ಪ್ರದರ್ಶನ ನಡೆಯಿತು.
ಗುರುರಾಜ ಹೊಳ್ಳ ಬಾಯಾರು ಸಂಸ್ಮರಣಾ ಭಾಷಣಗೈದರು. ಕುಂಬಳೆ ಸುಂದರ ರಾವ್ ಅವರ ಪುತ್ರಿ ಸಬಿತ ಉಪಸ್ಥಿತರಿದ್ದು ಗೌರವಾರ್ಪಣೆಯನ್ನು ಸ್ವೀಕರಿಸಿದರು. ಕ್ಷೇತ್ರದ ಅರ್ಚಕರೂ ಕಾರ್ಯಕ್ರಮದ ಪ್ರಾಯೋಜಕ ಕೇಶವ ಅಡಿಗ ಕುಂಬಳೆ, ರಜತರಂಗದ ಅಧ್ಯಕ್ಷ ಡಾ. ಹರಿ ಕಿರಣ್ ಬಂಗೇರ ಮತ್ತು ಪ್ರಧಾನ ಕಾರ್ಯದರ್ಶಿ ಹರಿನಾರಾಯಣ ಮಯ್ಯ ಬಜೆ, ತರಬೇತಿ ಕೇಂದ್ರದ ಅಧ್ಯಕ್ಷ ಚಂದ್ರಮೋಹನ ಕೂಡ್ಲು ಉಪಸ್ಥಿತರಿದ್ದರು. ಕಿಶೋರ್ ಕೂಡ್ಲು, ನವೀನಚಂದ್ರ ಶರ್ಮ, ಕೃಷ್ಣಮೂರ್ತಿ ಅಡಿಗ ಸಹಕರಿಸಿದರು. ಬಳಿಕ ತರಬೇತಿ ಕೇಂದ್ರದ ಸದಸ್ಯರಿಂದ ಪಾಂಚಜನ್ಯ ಎಂಬ ಕಥಾನಕದ ಯಕ್ಷಗಾನ ಪ್ರದರ್ಶನ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ರಾಮ್ ಪ್ರಸಾದ್ ಮಯ್ಯ ಕೂಡ್ಲು, ಚೆಂಡೆ ಮದ್ದಳೆಯಲ್ಲಿ ಲಕ್ಷ್ಮೀಶ ಬೇಂಗ್ರೋಡಿ, ಪೃಥ್ವಿಚಂದ್ರ ಪೆರುವೊಡಿ ಭಾಗವಹಿಸಿದ್ದರು.

.jpg)
