ಪತ್ತನಂತಿಟ್ಟ: ಶಬರಿಮಲೆ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ ತಂತ್ರಿ ಕಂಠಾರರ್ ರಾಜೀವರರ್ ಅವರ ಚೆಂಗನ್ನೂರಲ್ಲಿರುವ ಮನೆಗೆ ಬಿಜೆಪಿ ನಾಯಕರು ಭೇಟಿ ನೀಡಿದರು. ಆಲಪ್ಪುಳ ದಕ್ಷಿಣ ಜಿಲ್ಲಾ ಅಧ್ಯಕ್ಷ ಸಂದೀಪ್ ವಾಚಸ್ಪತಿ ನೇತೃತ್ವದ ತಂಡ ಶನಿವಾರ ಬೆಳಿಗ್ಗೆ ಮನೆಗೆ ತಲುಪಿ ಕುಟುಂಬ ಸದಸ್ಯರನ್ನು ಭೇಟಿ ಮಾಡಿತು.
ಭೇಟಿಯ ನಂತರ, ತಂತ್ರಿಗಳ ಬಂಧನವು ಆತುರದಿಂದ ಕೂಡಿದ್ದು, ಅದರಲ್ಲಿ ಬಹಳಷ್ಟು ನಿಗೂಢತೆ ಇದೆ ಎಂದು ಸಂದೀಪ್ ವಾಚಸ್ಪತಿ ಹೇಳಿದರು. ಕೇರಳದಲ್ಲಿ ಪ್ರಭಾವಿ ಕುಟುಂಬದ ಸದಸ್ಯರ ಬಂಧನದ ಸಂದರ್ಭದಲ್ಲಿ ನಾವು ಬೆಂಬಲ ನೀಡಿ ಬಂದಿರುವುದಾಗಿ ಅವರು ಸ್ಪಷ್ಟಪಡಿಸಿದರು. ಪ್ರಕರಣದ ಮುಖ್ಯ ಕೇಂದ್ರವಾಗಬೇಕಾದ ದೇವಸ್ವಂ ಸಚಿವರನ್ನು ಪ್ರಶ್ನಿಸದೆ, ಪ್ರಕರಣವನ್ನು ತಂತ್ರಿಗಳತ್ತ ಕೊಂಡೊಯ್ದು ನಿಲ್ಲಿಸುವ ಹುನ್ನಾರ ಸರಿಯಲ್ಲ. ಈ ನಿಟ್ಟಿನಲ್ಲಿ ಸೂಕ್ತ ಪ್ರತಿಭಟನೆ ಪಕ್ಷ ನಡೆಸಲಿದೆ ಎಂದವರು ಈ ಸಂದರ್ಭ ತಿಳಿಸಿದರು.

