ತಿರುವನಂತಪುರಂ: ಯೂಟ್ಯೂಬ್ ಚಾನೆಲ್‍ನಲ್ಲಿ ಸಂತ್ರಸ್ಥೆಯನ್ನು ರಾಹುಲ್ ಈಶ್ವರ್ ಮತ್ತೊಮ್ಮೆ ಅವಮಾನಿಸಿದ್ದಾರೆ ಎಂದು ಉಲ್ಲೇಖಿಸಿ, ರಾಹುಲ್ ಈಶ್ವರ್ ಅವರ ಜಾಮೀನು ರದ್ದುಗೊಳಿಸುವಂತೆ ಪೋಲೀಸರು ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ. ರಾಹುಲ್ ಈಶ್ವರ್ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ್ದಾರೆ ಎಂದು ಪೆÇಲೀಸರು ಗಮನಸೆಳೆದಿದ್ದಾರೆ.
ಯೂಟ್ಯೂಬ್ ಚಾನೆಲ್‍ನಲ್ಲಿ ಮಾಡಿದ ವೀಡಿಯೊ ಹೇಳಿಕೆಗಳು ಸಂತ್ರಸ್ಥೆಯ ಘನತೆಗೆ ಧಕ್ಕೆ ತರುತ್ತಿವೆ ಮತ್ತು ತನಿಖೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ ಎಂದು ಪೆÇಲೀಸ್ ಅರ್ಜಿಯಲ್ಲಿ ಹೇಳಲಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ರಾಹುಲ್ ಮಾಂಕೂಟತ್ತಿಲ್ ಗೆ ಜಾಮೀನು ನೀಡಿದಾಗ, ದೂರುದಾರರ ವಿರುದ್ಧ ಕೆಟ್ಟ ಹೇಳಿಕೆಗಳನ್ನು ನೀಡದಂತೆ ನ್ಯಾಯಾಲಯವು ಕಟ್ಟುನಿಟ್ಟಾಗಿ ಸೂಚಿಸಿತ್ತು.

