ಉಪ್ಪಳ: ಪೈವಳಿಕೆಯ ಲಾಲ್ ಬಾಗ್- ಕುರುಡಪದವು ರಸ್ತೆ ಅಭಿವೃದ್ಧಿ ಹಿನ್ನೆಲೆಯಲ್ಲಿ ದುರಸ್ತಿ ಕಾಮಗಾರಿ ನಡೆಸಲಾಗುತ್ತಿದೆ. ಇದರಿಂದಾಗಿ ಈ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ನಿಯಂತ್ರಣ ಏರ್ಪಡಿಸಲಾಗಿದೆ. ಪ್ರಸ್ತುತ ವಾಹನಗಳು ಬದಲಿ ರಸ್ತೆಯಾದ ಚಿಪ್ಪಾರು ಶ್ರೀ ವಿಷ್ಣುಮೂರ್ತಿ ಕ್ಷೇತ್ರ ಬಳಿಯಲ್ಲಿ ಸಂಚರಿಸಬೇಕಾಗುತ್ತಿದ್ದು, ಈ ರಸ್ತೆ ಇಕ್ಕಟ್ಟಾಗಿ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಮೀದ್ ಡ್ರೈವರ್ ಚಿಪ್ಪಾರು, ರೋಷನ್ ಡಿಸೋಜ ಅಮ್ಮೇರಿ, ನೌಫಲ್ ಚಿಪ್ಪಾರು ಹಾಗೂ ಸ್ಥಳೀಯರ ಸಹಕಾರದಲ್ಲಿ ಜೆಸಿಬಿ ಬಳಸಿ ರಸ್ತೆಯನ್ನು ದುರಸ್ತಿಗೊಳಿಸಲಾಗಿದೆ.
ಲ್ಲ್ ಬಾಗ್-ಅಮ್ಮೇರಿ ತನಕದ ಮೂರೂವರೆ ಕಿಲೋಮೀಟರ್ ರಸ್ತೆಯನ್ನು ಅಭಿವೃದ್ಧಿಗೊಳಿಸುವ ಕಾಮಗಾರಿ ಆರಂಭಗೊಂಡಿದ್ದು, ಸುಮಾರು 2 ತಿಂಗಳು ಈ ರಸ್ತೆಯನ್ನು ಮುಚ್ಚುಗಡೆಗೊಳಿಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಬಸ್ ಸಹಿತ ವಾಹನಗಳು ಬಾಯಾರು ಒಳರಸ್ತೆಯಾಗಿ ಚಿಪ್ಪಾರು- ಕುರುಡಪದವುಗೆ ಸಂಚರಿಸಬೇಕಾಗುತ್ತಿದೆ.

