ಮುಳ್ಳೇರಿಯ: ಚಿರತೆ ಮರಿಯನ್ನು ಹೋಲುವ ಅಪರೂಪದ ಪ್ರಾಣಿಯೊಂದು ಆದೂರಿನ ಆಲಂತಡ್ಕದಲ್ಲಿ ವಹನ ಡಿಕ್ಕಿಯಾಗಿ ಮೃತಪಟ್ಟಿದೆ. ಸ್ಥಳೀಯರು ಚಿರತೆ ಮರಿ ಎಂದು ಸಂಶಯಿಸಿ ಆತಂಕಕ್ಕೀಡಾಗಿದ್ದರು. ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಇದನ್ನು 'ಚಿರತೆ ಬೆಕ್ಕು'ಎಂದು ಗುರುತಿಸಿ ಜನರ ಆತಂಕ ನೀಗಿಸಿದ್ದಾರೆ. ಗುರುವಾರ ನಸುಕಿಗೆ ಚಿರತೆ ಬೆಕ್ಕು ಪತ್ತೆಯಾಗಿದೆ.
ವಾಹನ ಡಿಕ್ಕಿಯಾಗಿ ಚಿರತೆ ಮರಿ ಸತ್ತಿದ್ದು, ಇದರ ತಾಯಿ ಆಸುಪಾಸಿನಿಂದ ಆಗಮಿಸುವ ಸಾಧ್ಯತೆ ಬಗ್ಗೆ ಸ್ಥಳೀಯ ನಿವಾಸಿಗಳು ಆತಂಕಕ್ಕೊಳಗಾಗಿದ್ದರು. ನಾಗರಿಕರು ಅರಣ್ಯ ಇಲಾಖೆಗೆ ನೀಡಿದ ಮಾಹಿತಿಯನ್ವಯ ಸ್ಥಳಕ್ಕಾಗಮಿಸಿದ ಅಧಿಕಾರಿಗಲು ಜನರ ಸಂಶಯ ನಿವಾರಿಸಿದ್ದಾರೆ.



