ಮಂಜೇಶ್ವರ: ತಲಪ್ಪಾಡಿಯಲ್ಲಿ ಕೇರಳ ಕೆಎಸ್ಸಾರ್ಟಿಸಿ ಬಸ್ಸಿಗೆ ಕಲ್ಲೆಸೆದು ಗಾಜು ಪುಡಿಗೈದ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಳ ಮಣ್ಣಂಗುಳಿ ನಿವಾಸಿ ಹಮೀದಾಲಿ (65) ಎಂಬಾತನನ್ನು ಪೊಲೀಸರುಬಂಧಿಸಿದ್ದಾರೆ.
ಸೋಮವಾರ ರಾತ್ರಿ ಒಂಭತ್ತು ಗಂಟೆ ವೇಳೆಗೆ ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ ಕಾಸರಗೋಡು ಕೆಎಸ್ಸಾರ್ಟೀಸಿ ಡಿಪೆÇೀ ಗೆ ಸೇರಿದ ಬಸ್ಸಿಗೆ ಕಲ್ಲೆಸೆತದಿಂದ ಹಿಂಭಾಗದ ಗಾಜು ಪುಡಿಯಾಘಿದ್ದು,ಈ ಬಗ್ಗೆ ಮಂಜೇಶ್ವರ ಠಾಣೆ ಪೆÇೀಲೀಸರು ಕೇಸು ದಾಖಲಿಸಿಕೊಂಡು ಬಸ್ಸನ್ನು ವಶಕ್ಕೆ ತೆಗೆದುಕೊಂಡಿದ್ದರು. ನಂತರ ನಡೆಸಿದ ತನಿಖೆಯಲ್ಲಿ ಕಲ್ಲೆಸೆತ ನಡೆದ ಸ್ಥಳ ಕರ್ನಾಟಕದ ಪ್ರದೇಶವೆಂದು ಗುರುತಿಸಿದ್ದು, ಈ ಬಗ್ಗೆ ಉಳ್ಳಾಲ ಠಾಣೆ ಪೆÇೀಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಬಸ್ಸಿನಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಿದ್ದುದರಿಂದ ಅಪಾಯ ಉಂಟಾಗಿರಲಿಲ್ಲ.
ರಾತ್ರಿ ವೇಳೆ ಬಸ್ ನಿಲ್ಲಿಸದೆ ಮುಂದೆ ಸಾಗುತ್ತಿರುವ ಕೆಎಸ್ಸಾರ್ಟಿಸಿ ಬಸ್ ಚಾಲಕರ ಧೋರಣೆ ಖಂಡಿಸಿ ಕಲ್ಲೆಸೆದಿರುವುದಾಗಿ ವೃದ್ಧ ಪೊಲೀಸರಿಗೆ ತಿಳಿಸಿದ್ದಾನೆ.

