ಮುಳ್ಳೇರಿಯ: ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ನಾಟೆಕಲ್ಲು ಪೂತಪ್ಪಲ ಎಂಬಲ್ಲಿ ಆಟವಾಡುತ್ತಿದ್ದ ಸಂದರ್ಭ ವಿದ್ಯುತ್ ಟ್ರಾನ್ಸ್‍ಫಾರ್ಮರ್‍ನಿಂದ ಶಾಕ್ ತಗುಲಿದ ಪರಿಣಾಮ ಬಾಲಕ ಗಾಯಗೊಂಡಿದ್ದು, ಈತನನ್ನು ಕಾಸರಗೋಡಿನ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೂತಪ್ಪಲ ನಿವಾಸಿ ಮುಸ್ತಫಾ ಎಂಬವರ ಪುತ್ರ ಬಿಸ್ರುಲ್ ಹಾಫಿ(12)ಗಾಯಾಳು. ಟ್ರಾನ್ಸ್‍ಫಾರ್ಮರ್ ಸುತ್ತು ಆವರಣಬೇಲಿ ಸ್ಥಾಪಿಸದೆ, ಕೆಎಸ್‍ಇಬಿ ನಿರ್ಲಕ್ಷ್ಯ ವಹಿಸಿರುವುದಾಗಿ ಸ್ಥಳೀಯರು ದೂರಿದ್ದಾರೆ.

