ಕಾಸರಗೋಡು: ತ್ರಿಶೂರ್‍ನಲ್ಲಿ ನಡೆಯಲಿರುವ ರಾಜ್ಯ ಶಾಲಾ ಕಲೋತ್ಸವದ ಬಂಗಾರದ ಟ್ರೋಫಿಯ ಮೆರವಣಿಗೆ ಬುಧವಾರ ಕಾಸರಗೋಡು ಮೊಗ್ರಾಲ್ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಿಂದ ಆರಂಭಗೊಂಡಿತು.
ಮಂಜೇಶ್ವರ ಶಾಸಕೆ.ಕೆ ಎಂ ಅಶ್ರಫ್ ಫ್ಲ್ಯಾಗ್‍ಆಫ್ ನಡೆಸುವ ಮೂಲಕ ಯಾಥ್ರೆ ಉದ್ಘಾಟಿಸಿದರು. ಕಾಸರಗೋಡು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಾಬು ಅಬ್ರಹಾಂ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಗ್ರಾಪಂ ಅಧ್ಯಕ್ಷ ವಿ.ಪಿ ಅಬ್ದುಲ್ ಖಾದರ್, ಉಪಾಧ್ಯಕ್ಷೆ ಬಿಲ್ಕೀಸ್,ಜಿಲ್ಲಾ ಶಿಕ್ಷಣ ಉಪನಿರ್ದೇಶಕಿ ಸತ್ಯಭಾಮ, ಉದಯಕುಮಾರಿ, ಅನಿತಾ, ಶಾಲಾ ಪ್ರಾಂಶಪಾಲೆ ಬಿನಿ ವಿ.ಎಸ್, ಮುಖ್ಯ ಶಿಕ್ಷಕ ಜಯರಾಮ್ ಮೊದಲಾದವರು ಉಪಸ್ಥಿತರಿದ್ದರು. ಚೆಮ್ನಾಡಿನಲ್ಲಿ ಶಾಸಕ ಸಿ.ಎಚ್ ಕುಞಂಬು ಅವರ ನೇತೃತ್ವದಲ್ಲಿ ಯಾತ್ರೆ ಬರಮಾಡಿಕೊಳ್ಳಲಾಯಿತು. ರಾತ್ರಿ ಕೋಯಿಕ್ಕೋಡಿನಲ್ಲಿ ಇಂದಿನ ಯಾಥ್ರೆ ಸಮರೋಪಗೊಳ್ಳಲಿದೆ. 36ಕೇಂದ್ರಗಳ ಮೂಲಕಸಂಚರಿಸಿ ಜ. 13ರಂದು ಸಮ್ಮೇಳನ ಸ್ಥಳ ತ್ರಿಶೂರ್‍ನ ತೆಕ್ಕಿನ್ಕಾಡು ಮೈದಾನಕ್ಕೆ ತಲುಪಲಿದೆ. ಜ. 14 ರಿಂದ ರಾಜ್ಯಮಟ್ಟದ ಶಾಲಾಕಲೋತ್ಸವ ಆರಂಭವಾಗಲಿದೆ.

