ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಅರಿಕ್ಕಾಡಿ ಒಡ್ಡು ಮೈದಾನ ಸನಿಹದ ನಿವಾಸಿ ಬಾಬು ಎಂಬವರ ಪುತ್ರ ಸಂತೋಷ್(30)ಅವರ ಮೃತದೇಹ ಮನೆ ಬೆಡ್‍ರೂಮ್‍ನೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸಂತೋಷ್ ರೀಲ್ಸ್ ಚಿತ್ರೀಕರಣದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ತಾನು ರಚಿಸಿದ ರೀಲ್ಸ್ ವಿಫಲವಾದ ಹಿನ್ನೆಲೆಯಲ್ಲಿ ಮನನೊಂದು ಕೃತ್ಯವೆಸಗಿರಬೇಕೆಂದು ಸಂಶಯಿಸಲಾಗಿದೆ. ರೀಲ್ಸ್ ವಿಫಲವಾಗಿರುವ ವಿಷಯವನ್ನು ಸಂತೋಷ್ ತನ್ನ ಸ್ನೇಹಿತಗೆ ತಿಳಿಸಿ ದು:ಖ ತೋಡಿಕೊಂಡಿದ್ದರೆನ್ನಲಾಗಿದೆ. ಅಲ್ಪ ಹೊತ್ತಿನ ನಂತರ ಸ್ನೇಹಿತ, ಸಂತೋಷ್ ಮೊಬೈಲ್‍ಗೆ ಕರೆ ಮಾಡಿದರೂ ಸ್ವೀಕರಿಸದಿದ್ದಾಗ, ಮನೆಯವರಿಗೆ ನೀಡಿದ ಮಾಹಿತಿಯನ್ವಯ ಕೊಠಡಿಯೊಳಗೆ ತಪಾಸಣೆ ನಡೆಸಿದಾಗ ಮೃತದೇಹ ಪತ್ತೆಯಾಗಿತ್ತು. ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.


