ಪೆರ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಮಂಜೇಶ್ವರ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ಜ್ಞಾನ ವಿಕಾಸ ಕೇಂದ್ರಗಳು, ಶೌರ್ಯ ವಿಪತ್ತು ಘಟಕ ಮತ್ತು ವೈಶಾಲಿ ನವಜೀವನ ಸಮಿತಿ, ಪೆರ್ಲ ವಲಯ ಇವುಗಳ ಸಂಯುಕ್ತಾಶ್ರಯದಲ್ಲಿ ಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮ ಜ.11ರಂದು ಪೆರ್ಲ ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ (ಉಳ್ಳಾಲ್ತಿ).ವಿಷ್ಣುಮೂರ್ತಿ ಕ್ಷೇತ್ರದಲ್ಲಿ ಜರಗಲಿದೆ.
ಬೆಳಗ್ಗೆ ಗಂಟೆ 8ರಿಂದ ಭಜನೆ, ಬಳಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯುವುದು. 11.30ಕ್ಕೆನಡೆಯುವ ಸಭಾ ಕರ್ಯಕ್ರಮದಲ್ಲಿ ಒಕ್ಕೂಟಗಳ ವಲಯ ಅಧ್ಯಕ್ಷ ಶ್ರೀಧರ ಮಣಿಯಾಣಿ ಅಧ್ಯಕ್ಷತೆ ವಹಿಸುವರು. ಶ್ರೀ ಕ್ಷೇ.ಧ.ಗ್ರಾ.ಯೋ.ಬಿ.ಸಿ ಟ್ರಸ್ಟ್ ನಿದೇರ್ಶಕ ಬಾಬು ನಾಯ್ಕ, ಇಡಿಯಡ್ಕ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಸದಾನಂದ ಶೆಟ್ಟಿ ಕುದ್ವ,
ವೇದಮೂರ್ತಿ ಶ್ರೀ ಹರಿನಾರಾಯಣ ಮಯ್ಯ ಕುಂಬಳೆ, ಡಾ. ಸ್ವಪ್ನ ಜಯಗೋವಿಂದ ಉಕ್ಕಿನಡ್ಕ, ಜನಜಾಗೃತಿ ವೇದಿಕೆ, ಪೆರ್ಲ ವಲಯ ಅಧ್ಯಕ್ಷ ಬಿ.ಪಿ ಶೇಣಿ,ಭಜನಾ ಪರಿಷತ್, ಪೆರ್ಲ ವಲಯ ಅಧ್ಯಕ್ಷ ಶ್ರೀಧರ್ ಕುಕ್ಕಿಲ, ವಿಪತ್ತು ನಿರ್ವಹಣಾ ಘಟಕ ಪೆರ್ಲ ವಲಯ ಮಾಸ್ಟರ್ ಸುರೇಂದ್ರ ಶೇಣಿ, ವೈಶಾಲಿ ನವಜೀವನ ಸಮಿತಿ, ಪೆರ್ಲ ವಲಯ
ಅಧ್ಯಕ್ಷ ಜಗದೀಶ್, ಪರ್ತಾಜೆ, ಮಂಜೇಶ್ವರ ತಾಲೂಕು ಯೋಜನಾಧಿಕಾರಿ ಶಶಿಕಲಾ ಸುವರ್ಣ, ವಲಯ ಮೇಲ್ವಿಚಾರಕಿ ಜಯಶ್ರೀ ಮೊದಲಾದವರು ಭಾಗವಹಿಸುವರು. ಕಾರ್ಯಕ್ರಮದ ಅಂಗವಾಗಿ ವಿವಿಧ ತಂಡಗಳಿಂದ ಸಾಂಸ್ಕøತಿಕ ವೈವಿಧ್ಯ ನಡೆಯುವುದು.

