ಕಾಸರಗೋಡು: ಕಾಞಂಗಾಡು ಜಿಲ್ಲಾ ಕಾರಾಗೃಹದಿಂದ ಪರಾರಿಯಾಗಲೆತ್ನಿಸಿದ ವಿಚಾರಣಾಧೀನ ಕೈದಿ, ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ನೆಲ್ಲಿಕಟ್ಟೆ ಅಮೂಸ್ ನಗರದ ಕ್ವಾಟ್ರಸ್‍ನಲ್ಲಿ ವಾಸಿಸುತ್ತಿರುವ ಟಿ.ಎಂ ಅಬ್ದುಲ್ ಸುಹೈಲ್ ಎಂಬಾತನನ್ನು ಜೈಲು ಅಧಿಕಾರಿಗಳು ಕೈಯಾರೆ ಸೆರೆ ಹಿಡಿದಿದ್ದಾರೆ.
ಬೆಳಗ್ಗೆ ಸೆಲ್‍ನಿಂದ ಹೊರಗಿಳಿದ ಆರೋಪಿ ಅಬ್ದುಲ್ ಸುಹೈಲ್ ಜೈಲಿಗೆ ಪ್ರವೇಶಿಸುತ್ತಿದ್ದಂತೆ, ಅಡುಗೆ ಕೊಠಡಿಯ ಮೇಲ್ಭಾಗಕ್ಕೆ ಏರಿ, ಅಲ್ಲಿಂದ ಪರಾರಿಯಾಗಲು ಯತ್ನಿಸಿರುವುದಾಗಿ ಜೈಲು ಅಧೀಕ್ಷಕರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಕ್ವಾಟ್ರಸ್ ಒಂದರಿಂದ 10ಸಾವಿರ ರಊ.ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಬದಿಯಡ್ಕ ಠಾಣೆ ಪೊಲೀಸರು ಈತನನ್ನುಬಂಧಿಸಿದ್ದು, 2025 ಜುಲೈ 31ರಿಂದ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀಕ ಕೈದಿಯಾಗಿ ಮುಂದುವರಿಯುತ್ತಿದ್ದಾನೆ.

