ಕಾಸರಗೋಡು: ಇತ್ತೀಚಿಗೆ ನಡೆದ ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯಲ್ಲಿ ಕಾಸರಗೋಡು ನಗರ ಸಬೆಗೆ ಬಿಜೆಪಿಯಿಂದ ಸ್ಪರ್ದಿಸಿ ವಿಜೇತರಾದ ನಗರಸಭಾ ಸದಸ್ಯರಿಗೆ, ಗೌರವಾಭಿನಂದನೆ ¸ನಡೆಯಿತು. ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ಟೀಚರ್ ಸಾರಥ್ಯದ ಕಾಸರಗೋಡು ಕನ್ನಡ ಭವನದ "ರಜತ ಸಂಭ್ರಮ "ಪ್ರಯುಕ್ತ ನಡೆದ "ನಾಡು -ನುಡಿ ಹಬ್ಬ "ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಡಾ.ವಾಮನ್ ರಾವ್ ಬೇಕಲ್-ಸಂದ್ಯಾ ರಾಣಿ ದಂಪತಿ ನೂತನ ನಗರ ಸಭಾ ಸದಸ್ಯರುಗಳನ್ನು ಶಾಲು ತೊಡಿಸಿ ಗೌರವಿಸಿ ಅಭಿನಂದಿಸಿದರು.


