ಫ್ಯಾರಿಸ್: ರಶ್ಯದಿಂದ ಬರುತ್ತಿದ್ದ ತೈಲ ಟ್ಯಾಂಕರ್‌ನ್ನು ಮೆಡಿಟರೇನಿಯನ್ ಸಮುದ್ರದಲ್ಲಿ ತಡೆದ ಫ್ರಾನ್ಸ್ ನೌಕಾಪಡೆ ಅದನ್ನು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.
ಬ್ರಿಟನ್‌ನಿಂದ ದೊರೆತ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಫ್ರಾನ್ಸ್‌ನ ಕಡಲಾಧಿಕಾರಿಗಳು 'ಗ್ರಿಂಚ್' ಹಡಗನ್ನು ವಶಕ್ಕೆ ಪಡೆದಿದ್ದಾರೆ.
ಈ ಹಡಗು ರಶ್ಯಾದ ನಿರ್ಬಂಧಿತ ತೈಲವನ್ನು ಸಾಗಿಸುತ್ತಿತ್ತು ಹಾಗೂ ಪೂರ್ವ ಆಫ್ರಿಕಾದ ಕೊಮೊರೊಸ್ ದ್ವೀಪಗಳ ನಕಲಿ ಧ್ವಜವನ್ನು ಹೊಂದಿದೆ ಎಂದು ಶಂಕಿಸಲಾಗಿದೆ. ಹಡಗಿನ ಸಿಬ್ಬಂದಿ ಭಾರತೀಯ ಮೂಲದವರು ಎಂದು ವರದಿ ತಿಳಿಸಿದೆ.