HEALTH TIPS

ರಕ್ತದೊತ್ತಡದ ಔಷಧಿಗಳು ಕಿಡ್ನಿಗೆ ಸಮಸ್ಯೆ ಒಡ್ಡುತ್ತವೆಯೇ?

ರಕ್ತದೊತ್ತಡದ ಔಷಧಿಗಳನ್ನು ಬದಲಿಸುವ ನಿರ್ಧಾರ ವೈದ್ಯರ ಸಲಹೆಯ ಮೇರೆಗೆ ಬರಬೇಕೇ ವಿನಾ ಮೂಢನಂಬಿಕೆ ಅಥವಾ ಭಯದಿಂದ ಅಲ್ಲ.

ರಕ್ತದೊತ್ತಡದ ಔಷಧಿಗಳು ಕಿಡ್ನಿಗೆ ಸಮಸ್ಯೆ ಉಂಟುಮಾಡುತ್ತವೆ ಎನ್ನುವ ನಂಬಿಕೆ ಬಹಳ ಮಂದಿಯಲ್ಲಿದೆ.

ಈ ಬಗ್ಗೆ ವೈದ್ಯರು ಏನು ಹೇಳುತ್ತಾರೆ?

ಮುಂಬೈ ಸೆಂಟ್ರಲ್‌ನಲ್ಲಿರುವ ವರ್ಕ್‌ಹಾರ್ಡ್ಟ್‌ ಹಾಸ್ಪಿಟಲ್ಸ್‌ನ ಹೃದಯರೋಗ ತಜ್ಞ ಡಾ. ಪ್ಯಾರಿನ್ ಸಂಗೋಯ್ ಅವರ ಪ್ರಕಾರ, "ರಕ್ತದೊತ್ತಡಕ್ಕಾಗಿ ಸೇವಿಸುವ ಔಷಧಿಗಳು ಕಿಡ್ನಿಗೆ ಹಾನಿ ಉಂಟುಮಾಡುವುದಿಲ್ಲ. ಆದರೆ ಚಿಕಿತ್ಸೆ ನೀಡದೆ ಇರುವ ಅಧಿಕ ರಕ್ತದೊತ್ತಡವೇ ಕಿಡ್ನಿಗೆ ಸಮಸ್ಯೆ ಉಂಟುಮಾಡುತ್ತದೆ. ದೀರ್ಘಕಾಲದವರೆಗೆ ರಕ್ತದೊತ್ತಡ ಅಧಿಕ ಪ್ರಮಾಣದಲ್ಲಿದ್ದರೆ, ಕಿಡ್ನಿಯಲ್ಲಿನ ಸಣ್ಣ ರಕ್ತನಾಳಗಳಿಗೆ ಹಾನಿ ಉಂಟಾಗುತ್ತದೆ. ತ್ಯಾಜ್ಯವನ್ನು ಫಿಲ್ಟರ್ ಮಾಡುವ ಅವುಗಳ ಸಾಮರ್ಥ್ಯ ಕ್ರಮೇಣ ಕುಸಿಯುತ್ತದೆ. ಈ ಕುಸಿತ ಸಾಮಾನ್ಯವಾಗಿ ಸದ್ದಿಲ್ಲದೆ ಸಂಭವಿಸುತ್ತದೆ ಮತ್ತು ವರ್ಷಗಳವರೆಗೆ ಗಮನಕ್ಕೆ ಬಾರದೇ ಇರಬಹುದು."

ಹೃದಯರೋಗ ತಜ್ಞರು ಹೇಳುವಂತೆ, ಅನೇಕ ಬಾರಿ ಅಧಿಕ ರಕ್ತದೊತ್ತಡ ಪತ್ತೆಯಾಗುವ ಹೊತ್ತಿಗೆ ಕಿಡ್ನಿಗೆ ಹಾನಿ ಈಗಾಗಲೇ ಆರಂಭವಾಗಿರುತ್ತದೆ. "ಚಿಕಿತ್ಸೆ ಪ್ರಾರಂಭವಾದ ನಂತರ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಿದ ಬಳಿಕ, ನಿಯಮಿತ ಪರೀಕ್ಷೆಗಳಲ್ಲಿ ಅಸ್ತಿತ್ವದಲ್ಲಿರುವ ಕಿಡ್ನಿ ಸಮಸ್ಯೆಗಳು ಗೋಚರವಾಗಬಹುದು. ಅಂತಹ ಸಂದರ್ಭಗಳಲ್ಲಿ ಜನರು ದೀರ್ಘಕಾಲ ಚಿಕಿತ್ಸೆ ನೀಡದ ಅಧಿಕ ರಕ್ತದೊತ್ತಡದಿಂದ ಉಂಟಾದ ಹಾನಿಯನ್ನು ಔಷಧಿಗಳಿಂದಾದ ಹಾನಿಯೆಂದು ತಪ್ಪಾಗಿ ದೂಷಿಸಬಹುದು" ಎಂದು ಡಾ. ಪ್ಯಾರಿನ್ ಸಂಗೋಯ್ ಹೇಳುತ್ತಾರೆ.

ರಕ್ತದೊತ್ತಡ ಸಾಮಾನ್ಯವಿದ್ದಾಗ ಔಷಧಿಯನ್ನು ಏಕೆ ನಿಲ್ಲಿಸಬಾರದು?

ರಕ್ತದೊತ್ತಡ ಸಾಮಾನ್ಯವಾಗಿರುವುದೆಂದರೆ ಚಿಕಿತ್ಸೆ ಫಲಕಾರಿಯಾಗುತ್ತಿದೆ ಎಂಬ ಅರ್ಥ. "ಅಧಿಕ ರಕ್ತದೊತ್ತಡ ಜೀವನಪೂರ್ತಿ ಇರುವ ಸ್ಥಿತಿಯಾಗಿರುತ್ತದೆ. ಔಷಧಿಯನ್ನು ನಿಲ್ಲಿಸುವುದರಿಂದ ಹಠಾತ್‌ವಾಗಿ ರಕ್ತದೊತ್ತಡ ಏರಬಹುದು. ಯಾವುದೇ ಎಚ್ಚರಿಕೆ ಚಿಹ್ನೆಗಳಿಲ್ಲದೆ ಅದು ಏರಿಕೆಯಾಗಿ, ಹೃದಯ, ಮೆದುಳು ಮತ್ತು ಕಿಡ್ನಿಗಳ ಮೇಲೆ ಒತ್ತಡ ಉಂಟುಮಾಡಬಹುದು. ಇದರಿಂದ ಹೃದಯಾಘಾತ, ಸ್ಟ್ರೋಕ್‌ ಮತ್ತು ಕಿಡ್ನಿ ಹಾನಿಯ ಅಪಾಯ ಹೆಚ್ಚಾಗುತ್ತದೆ" ಎಂದು ವೈದ್ಯರು ಎಚ್ಚರಿಸುತ್ತಾರೆ.

ವೈದ್ಯರನ್ನು ಸಂಪರ್ಕಿಸದೇ ಔಷಧಿ ನಿಲ್ಲಿಸುವುದು ಸರಿಯೇ?

ಅಧಿಕ ರಕ್ತದೊತ್ತಡದ ಔಷಧಿಯನ್ನು ಸ್ವತಃ ನಿಲ್ಲಿಸುವುದು ಬಹಳಷ್ಟು ಮಂದಿ ಮಾಡುವ ಸಾಮಾನ್ಯ ತಪ್ಪಾಗಿದೆ. "ಅನೇಕ ರೋಗಿಗಳು ಸಾಮಾಜಿಕ ಮಾಧ್ಯಮ, ಸ್ನೇಹಿತರ ಸಲಹೆ ಅಥವಾ ತಾವು ಸದೃಢರಾಗಿರುವ ಭಾವನೆಯಿಂದ ಔಷಧಿಯನ್ನು ನಿಲ್ಲಿಸುತ್ತಾರೆ. ಇದರಿಂದ ರಕ್ತದೊತ್ತಡ ನಿಯಂತ್ರಣ ತಪ್ಪಿ, ಅಂಗಾಂಗಗಳಿಗೆ ಆಗುವ ಹಾನಿ ಇನ್ನಷ್ಟು ವೇಗವಾಗಿ ಸಂಭವಿಸಬಹುದು. ಔಷಧಿಯ ಪ್ರಮಾಣ ಕಡಿಮೆ ಮಾಡುವುದು ಅಥವಾ ನಿಲ್ಲಿಸುವುದು ವೈದ್ಯರ ಮೇಲ್ವಿಚಾರಣೆಯಲ್ಲೇ ಆಗಬೇಕು" ಎಂದು ವೈದ್ಯರು ಹೇಳುತ್ತಾರೆ.

ಜೀವನಶೈಲಿ ಬದಲಾವಣೆ ಔಷಧಿಗೆ ಪರ್ಯಾಯವಾಗಬಹುದೇ?

ಆರೋಗ್ಯಕರ ಜೀವನಶೈಲಿಯಿಂದ ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಾಧ್ಯ. ಆದರೆ ವೈದ್ಯರ ಸಲಹೆಯಿಲ್ಲದೆ ಔಷಧಿಯನ್ನು ಬದಲಿಸುವುದು ಅಥವಾ ನಿಲ್ಲಿಸುವುದು ಸರಿಯಲ್ಲ. ಜೀವನಶೈಲಿ ಸುಧಾರಣೆಯಿಂದ ಔಷಧಿಯ ಡೋಸೇಜ್‌ ಕಡಿಮೆ ಮಾಡುವ ಅವಕಾಶ ಸಿಗಬಹುದು. ಆದರೆ ಔಷಧಿಯನ್ನು ಸಂಪೂರ್ಣವಾಗಿ ನಿಲ್ಲಿಸಲು ಸೂಕ್ಷ್ಮ ಮತ್ತು ನಿರಂತರ ವೈದ್ಯಕೀಯ ಮೇಲ್ವಿಚಾರಣೆ ಅಗತ್ಯವಿರುತ್ತದೆ.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries