ಕುಂಬಳೆ: ದೇಲಂಪಾಡಿ ಗ್ರಾಮ ಪಂಚಾಯಿತಿನ ಅಡೂರು ಗ್ರಾಮದ ಕೊರತಿಮೂಲೆ ಕೃಷ್ಣನಿವಾಸದ ಬಾಲಕೃಷ್ಣ ತಂತ್ರಿಗಳ ಸ್ಮರಣಾರ್ಥ ನೀಡುವ 2024-25ರ ಸಾಲಿನ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರವನ್ನು ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ 9ನೇ ತರಗತಿಯ ವಿದ್ಯಾರ್ಥಿ ಶಾಶ್ವತ್ ಕೋಡಿಮೂಲೆ ಅವರಿಗೆ ಶನಿವಾರ ನೀಡಲಾಯಿತು. ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ ವಧರ್ಂತ್ಯುತ್ಸವದ ಸಭಾ ಕಾರ್ಯಕ್ರಮದಲ್ಲಿ ಶಾಶ್ವತ್ ಅವರನ್ನು ಶಾಲು ಹೊದೆಸಿ, ಸ್ಮರಣಿಕೆ, ಪುಸ್ತಕ ಉಡುಗೊರೆ ಹಾಗೂ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು. ಸೀತಂಗೋಳಿಯ ವೈದ್ಯರಾದ ಡಾ. ಕೆ. ಸುರೇಶ ಕುಮಾರ್- ರೂಪಶ್ರೀ ಕೆ ದಂಪತಿಯ ಪುತ್ರರಾದ ಶಾಶ್ವತ್, ಗಣಿತ, ವಿಜ್ಞಾನ, ಚದುರಂಗ, ಕರಾಟೆಯಲ್ಲಿ ವಿಶೇಷ ಸಾಧನೆ ಮಾಡುತ್ತಿದ್ದಾರೆ.
ಸಭೆಯ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಬೆಜಪ್ಪೆ ವಹಿಸಿದ್ದರು. ಈ ಸಂದರ್ಭದಲ್ಲಿ ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಎಂ. ಶಶಿಶಧರ, ಶ್ರೀ ರಾಮಚಂದ್ರಾಪುರ ಮಠದ ಮುಳ್ಳೇರಿಯ ಮಂಡಲ ಗುರಿಕ್ಕಾರ ಸತ್ಯನಾರಾಯಣ ಭಟ್ ಮೊಗ್ರ, ಮಹಾ ಮಂಡಲ ಸೇವಾ ವಿಭಾಗದ ಅಧ್ಯಕ್ಷ ಕೃಷ್ಣಮೂರ್ತಿ ಮಾಡಾವು, ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಜಯದೇವ ಖಂಡಿಗೆ, ಶಾಲಾ ಪಿಟಿಎ ಅಧ್ಯಕ್ಷ ಉದಯ ಕುಮಾರ ಮಾಯಿಪ್ಪಾಡಿ, ಶಾಲಾ ಮಾತೃಸಂಘದ ಅಧ್ಯಕ್ಷೆ ದೀಪಶ್ರೀ ದೊಡ್ಡಮಾಣಿ, ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿ ಬಾಲಕೃಷ್ಣ ಶರ್ಮ, ಶಾಲಾ ಮುಖ್ಯ ಶಿಕ್ಷಕ ಶ್ಯಾಮ ಭಟ್ ದರ್ಬೆಮಾರ್ಗ, ಸಹ ಶಿಕ್ಷಕಿ ಚಿತ್ರಾ ಸರಸ್ವತಿ, ಸಾಹಿತಿ ಪ್ರಶಾಂತ ರಾಜ ವಿ ತಂತ್ರಿ ಮೊದಲಾದವರು ಉಪಸ್ಥಿತರಿದ್ದರು.


