ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯತಿಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಡಿ. ಶಂಕರ ಅವರನ್ನು ಅಚೀವ್ ಟ್ರಸ್ಟ್ ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು. ಗ್ರಾಮ ಪಂಚಾಯತಿ ಕಚೇರಿಯಲ್ಲಿ ನಡೆದ ಸ್ನೇಹಪೂರ್ಣ ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಗ್ರಾ.ಪಂ. ಸದಸ್ಯ ಬಾಲಕೃಷ್ಣ ಶೆಟ್ಟಿ ಹಾಗೂ ಬ್ಲಾಕ್ ಪಂಚಾಯತಿ ಸದಸ್ಯ ಮಹೇಶ್ ವಳಕ್ಕುಂಜ ಉಪಸ್ಥಿತರಿದ್ದರು.
ಅಚೀವ್ ಟ್ರಸ್ಟ್‍ನ ಪರವಾಗಿ ಟ್ರಸ್ಟಿ ರೇಮಾ ಸುನಿಲ್, ನಿರ್ದೇಶಕಿ ಡಾ. ರಶ್ಮಿ ಪ್ರಕಾಶ್ ಮತ್ತು ಪ್ರಬಂಧಕಿ ರಾಜೇಶ್ವರಿ ಕುಂಜಾರ್ ಭಾಗವಹಿಸಿ ಪಂಚಾಯತಿ ನೇತೃತ್ವಕ್ಕೆ ಶುಭಾಶಯಗಳನ್ನು ಸಲ್ಲಿಸಿದರು. ಸಾಮಾಜಿಕ ಅಭಿವೃದ್ಧಿ, ಶಿಕ್ಷಣ, ಆರೋಗ್ಯ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಪಂಚಾಯತಿ ಮತ್ತು ಅಚೀವ್ ಟ್ರಸ್ಟ್ ಸಂಯುಕ್ತವಾಗಿ ಕೆಲಸ ಮಾಡುವ ಬಗ್ಗೆ ಚರ್ಚಿಸಲಾಯಿತು. ಗ್ರಾ.ಪಂ. ಸದಸ್ಯರು, ಟ್ರಸ್ಟ್‍ನ ಜನಪರ ಕಾರ್ಯಗಳಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

.jpg)
