ಒಟ್ಟು 47 ಸದಸ್ಯ ರಾಷ್ಟ್ರಗಳಿರುವ ಮಂಡಳಿಯಲ್ಲಿ ಈ ನಿರ್ಣಯವನ್ನು ಅಂಗೀಕರಿಸಲಾಗಿದ್ದು, 25 ದೇಶಗಳು ನಿರ್ಣಯದ ಪರವಾಗಿ, 7 ದೇಶಗಳು ವಿರೋಧವಾಗಿ ಮತ ಚಲಾಯಿಸಿವೆ. 14 ದೇಶಗಳು ಮತದಾನದಿಂದ ದೂರ ಉಳಿದಿವೆ.
ಯಾವುದೇ ದೇಶ-ನಿರ್ದಿಷ್ಟ ನಿರ್ಣಯಗಳನ್ನು ಸಾಮಾನ್ಯವಾಗಿ ಬೆಂಬಲಿಸದಿರುವ ಇತಿಹಾಸ ಹೊಂದಿರುವ ಭಾರತ, ಇರಾನ್‌ನ ಮಾನವ ಹಕ್ಕು ಉಲ್ಲಂಘನೆಗೆ ಸಂಬಂಧಿಸಿದ ಈ ನಿರ್ಣಯದ ವಿರುದ್ಧ ಮತ ಚಲಾಯಿಸಿದೆ. ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಅಮೆರಿಕ ಇರಾನ್‌ಗೆ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಭಾರತದ ಈ ನಿಲುವು ಮಹತ್ವ ಪಡೆದುಕೊಂಡಿದೆ.
2022ರಲ್ಲಿ ಸತ್ಯಶೋಧನಾ ಸಮಿತಿ ನೇಮಕಗೊಂಡ ಸಂದರ್ಭದಲ್ಲಿ ಭಾರತ ಮತದಾನದಿಂದ ದೂರ ಉಳಿದಿದ್ದರೂ, ಆ ವೇಳೆ ನಿರ್ಣಯದ ವಿರುದ್ಧ ಮತ ಚಲಾಯಿಸಿರಲಿಲ್ಲ.
ಇತ್ತ ಭಾರತದ ಈ ನಿಲುವನ್ನು ಇರಾನ್‌ನ ರಾಯಭಾರಿ ಮುಹಮ್ಮದ್ ಫತ್ಹ್ ಅಲಿ ಸ್ವಾಗತಿಸಿದ್ದಾರೆ.

