ಬದಿಯಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕಾಸರಗೋಡು ತಾಲೂಕು ಬದಿಯಡ್ಕ ವಲಯದ ಕಡಂಬಳ ಕಾರ್ಯಕ್ಷೇತ್ರದ ಶ್ರೀಕೃಷ್ಣ ತಂಡದ ಸದಸ್ಯೆ ಸುಶೀಲ ಇವರು ಪಾಶ್ಶ್ರ್ವವಾಯು ಖಾಯಿಲೆಯಿಂದ ಬಳಲುತ್ತಿದ್ದು, ಇವರಿಗೆ ಚಿಕಿತ್ಸಾ ವೆಚ್ಚ ಭರಿಸಲು ಕಷ್ಟಸಾಧ್ಯವಾದ್ದರಿಂದ ಕ್ಷೇತ್ರಕ್ಕೆ ಕ್ರಿಟಿಕಲ್ ಇಲ್ ನೆಸ್ ಫಂಡ್‍ಗೆ ಮನವಿ ನೀಡಿದ್ದು, ಕ್ಷೇತ್ರದಿಂದ ರೂ. 30000 ಮೊತ್ತವನ್ನು ಮಂಜೂರು ಮಾಡಲಾಗಿದೆ. ಇದರ ಮಂಜೂರಾತಿ ಪತ್ರವನ್ನು ತಾಲೂಕಿನ ಯೋಜನಾಧಿಕಾರಿ ದಿನೇಶ್ ಅವರ ಮಕ್ಕಳಾದ ರದೀಶ್ ಹಾಗೂ ರಮ್ಯಾ ಅವರಿಗೆ ಹಸ್ತಾಂತರಿಸಿದರು. ಸಂದರ್ಭದಲ್ಲಿ ಬದಿಯಡ್ಕ ಗ್ರಾಮ ಪಂಚಾಯಿತಿ ಸದಸ್ಯೆ ಅಶ್ವತಿ, ಕಡಂಬಳ ಒಕ್ಕೂಟದ ಅಧ್ಯಕ್ಷೆ ರತ್ನಾವತಿ, ಸಿಡಿಎಸ್ ಸದಸ್ಯೆ ಪ್ರೇಮ, ವಲಯದ ಮೇಲ್ವಿಚಾರಕಿ ಸುಗುಣ ಎನ್ ಹವಲ್ದಾರ್, ಒಕ್ಕೂಟ ಕಾರ್ಯದರ್ಶಿ ಅನ್ನಪೂರ್ಣೇಶ್ವರಿ, ಶ್ರೀಕೃಷ್ಣ ತಂಡದ ಕಾರ್ಯದರ್ಶಿ ಜಯಲಕ್ಷ್ಮಿ, ಸೇವಾ ಪ್ರತಿನಿಧಿ ಅನಿತಾ ಕುಮಾರಿ ಉಪಸ್ಥಿತರಿದ್ದರು.

.jpg)
