ಮಧೂರು: ಇಲ್ಲಿಗೆ ಸಮೀಪದ ಉಳಿಯ ಶ್ರೀ ಧನ್ವಂತರಿ ಮಹಾವಿಷ್ಣು ಕ್ಷೇತ್ರ ಪರಿಸರದಲ್ಲಿ ವರ್ಷಂಪ್ರತಿ ಆಚರಿಸುವ ಬಯಲುಕೋಲ ಮಹೋತ್ಸವ ಜ. 19 ಮತ್ತು 20 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ವಿಶೇಷ ಪೂಜೆ ಜರಗಿ ಭಂಡಾರ ಹೊರಟು ತೊಡಂಙಲ್, ಕುಳಿಚ್ಚಾಟಂ, ಅನ್ನದಾನ ಹಾಗೂ ಮರುದಿನ ಬೆಳಿಗ್ಗೆ ವಿಷ್ಣುಮೂರ್ತಿ ದೈವದ ನೃತ್ಯಗಳು ಜರಗಿ ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಬ್ರಹ್ಮಶ್ರೀ ಉಳಿಯುತ್ತಾಯ ವಿಷ್ಣು ಆಸ್ರ ನೇತೃತ್ವ ವಹಿಸಿದ್ದರು.


