ಕಾಸರಗೋಡು: ಫೆಬ್ರವರಿ 08 ರಂದು ಕಾಞಂಗಾಡ್ ನಗರಸಭೆ ವ್ಯಾಪ್ತಿಯಲ್ಲಿ ನಡೆಯಲಿರುವ ಹಿಂದೂ ಏಕತಾ ಸಮ್ಮೇಳನದ ಭಾಗವಾಗಿ, ಸ್ವಾಮಿ ನಿತ್ಯಾನಂದ ಆಶ್ರಮದಲ್ಲಿ ಪೆÇೀಷಕರ ಸಮಿತಿ ರಚನೆ ಸಭೆ ನಡೆಯಿತು. ಉತ್ಸವ ಸಮಿತಿ ಅಧ್ಯಕ್ಷ ವಕೀಲ ಅರವಿಂದನ್ ಅಧ್ಯಕ್ಷತೆ ವಹಿಸಿದ್ದರು. ರುಕ್ಮಿಣಿ ದಾಮೋದರನ್ ಉದ್ಘಾಟಿಸಿದರು. ಪೋಷಕರಾದ ದಾಮೋದರನ್ ಪಣಿಕ್ಕರ್ ಮುಖ್ಯ ಭಾಷಣ ಮಾಡಿದರು. ಸಮಿತಿಗೆ ಅಧ್ಯಕ್ಷರಾಗಿ ಶಾಲಿನಿ ಪ್ರಭಾಕರ್, ಉಪಾಧ್ಯಕ್ಷರಾಗಿ ಸಾವಿತ್ರಿ ಎಚ್, ಕೃಷ್ಣ ಮಂದಿರದ 101 ಸದಸ್ಯರ ಮಾತೃ ಸಮಿತಿಯ ಕಾರ್ಯದರ್ಶಿ- ನಳಿನಿ ಟಿ.ಕೆ., ವೀಣಾ ತೊಯಮ್ಮಳ್ ಹಾಗೂ ಮಿನಿ ಕುನ್ನುಮ್ಮಾಳ್, ಶೋಭಾ ಸುನಿಲ್ ಪುತ್ತಿಯಕೋಟ, ಸಹ ಕಾರ್ಯದರ್ಶಿಯಾಗಿ ಸೇರಿರುವ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.


