HEALTH TIPS

ವೆನಿಜುವೆಲಾ ಮೇಲೆ ದಾಳಿ: ಅಮೆರಿಕ ಪ್ರಭಾವ ಹೆಚ್ಚಿಸಲು ಟ್ರಂಪ್ ಪ್ಲಾನ್, ರಷ್ಯಾ, ಚೀನಾಕ್ಕೆ ಎಚ್ಚರಿಕೆಯ ಗಂಟೆ!

ನ್ಯೂಯಾರ್ಕ್: ವೆನೆಿಜುವೆಲಾದ ನಾಯಕ ನಿಕೋಲಸ್ ಮಡುರೊ ಅವರನ್ನು ರಾತ್ರೋ ರಾತ್ರಿ ಅಪಹರಿಸಿ, ಬಂಧಿಸಿದ ನಂತರ ಪಶ್ಚಿಮ ಗೋಳಾರ್ಧದಲ್ಲಿ (Hemisphere)ಪ್ರಭಾವವನ್ನು ಹೆಚ್ಚಿಸಲು ಅಮೆರಿಕ ಸಜ್ಜು ಆಗಿದೆ ಎಂಬುದನ್ನು ಡೊನಾಲ್ಡ್ ಟ್ರಂಪ್ ತಮ್ಮ ನಡೆಯ ಮೂಲಕ ತೋರಿಸಿದ್ದಾರೆ.

ಇದು ರಷ್ಯಾ ಮತ್ತು ಚೀನಾಕ್ಕೆ ಎಚ್ಚರಿಕೆಯಾಗಿ ಇರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವೆನಿಜುವೆಲಾವನ್ನು ಅಮೆರಿಕದ ನಿಯಂತ್ರಣಕ್ಕೆ ತೆಗೆದುಕೊಳ್ಳುವುದಾಗಿ ಟ್ರಂಪ್ ಹೇಳಿದ ನಂತರ ಯುಎಸ್ ವಿಶೇಷ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಮಡುರೊ ಅವರನ್ನು ಅಪಹರಿಸಿ, ನ್ಯೂಯಾರ್ಕ್ ಗೆ ಕರೆದೊಯ್ದಿದ್ದು, ಅಲ್ಲಿ ಸೆರೆಯಲ್ಲಿ ಇಡಲಾಗಿದೆ.

ಟ್ರಂಪ್ ಈ ದಾಳಿಯನ್ನು ಮನ್ರೋ ಸಿದ್ಧಾಂತದ ಆಧುನಿಕ ನವೀಕರಣ ಎಂದು ವಿವರಿಸಿದ್ದಾರೆ. ಅಧ್ಯಕ್ಷ ಜೇಮ್ಸ್ ಮನ್ರೋ ಅವರ 1823 ರ ನೀತಿಯಲ್ಲಿ ಯುರೋಪಿಯನ್ ರಾಷ್ಟ್ರಗಳು ಪಶ್ಚಿಮ ಗೋಳಾರ್ಧದ ರಾಷ್ಟ್ರಗಳ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಂತೆ ಎಚ್ಚರಿಸಿತು. ಲ್ಯಾಟಿನ್ ಅಮೇರಿಕಾದಲ್ಲಿ ಹೊರಗಿನ ಶಕ್ತಿಗಳಿಗೆ ಜಾಗವಿಲ್ಲ ಎಂದು ಘೋಷಿಸಿದ್ದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, ಮನ್ರೋ ಸಿದ್ಧಾಂತ ಒಂದು ದೊಡ್ಡ ಡೀಲ್ ಆಗಿದೆ. ಆದರೆ ನಾವು ಅದನ್ನು ಬಹಳಷ್ಟು ನೈಜವಾಗಿ ಬದಲಾಯಿಸಿದ್ದೇವೆ. ಈಗ ಅವರು ಅದನ್ನು ಡೊನ್ರೊ ಡಾಕ್ಯುಮೆಂಟ್ ಎಂದು ಕರೆಯುತ್ತಾರೆ. "ಪಶ್ಚಿಮ ಗೋಳಾರ್ಧದಲ್ಲಿ ಅಮೆರಿಕದ ಪ್ರಾಬಲ್ಯವನ್ನು ಮತ್ತೆ ಪ್ರಶ್ನಿಸಬಾರದು ಎಂದು ಹೇಳಿದರು.

ವಾರಗಳ ಹಿಂದೆ, ಶ್ವೇತಭವನದ ನೀತಿ ನಿರೂಪಕರು ರಾಷ್ಟ್ರೀಯ ಭದ್ರತಾ ಕಾರ್ಯತಂತ್ರದಲ್ಲಿ ಅದೇ ಕಲ್ಪನೆಗೆ ಹೆಚ್ಚಿನ ಬೌದ್ಧಿಕ ಹೊಳಪನ್ನು ನೀಡಿದ್ದರು. ಮನ್ರೋ ಸಿದ್ಧಾಂತಕ್ಕೆ "ಟ್ರಂಪ್ ಕೊರೊಲರಿ" ಎಂದು ಘೋಷಿಸಿತ್ತು. ಈ ನೀತಿಯು ಟ್ರಂಪ್‌ರ ಪ್ರಮುಖ ದೇಶೀಯ ಗುರಿಗಳಲ್ಲಿ ಒಂದಾದ ಆಯಕಟ್ಟಿನ ಸ್ವತ್ತುಗಳನ್ನು ವಶಪಡಿಸಿಕೊಳ್ಳುವುದು, ಅಪರಾಧದ ವಿರುದ್ಧ ಹೋರಾಡುವುದು ಅಥವಾ ವಲಸೆಯನ್ನು ಕೊನೆಗೊಳಿಸುವಂತಹ ಗುರಿಗಳಿಗಾಗಿ ಲ್ಯಾಟಿನ್ ಅಮೇರಿಕಾದಲ್ಲಿ ಯುಎಸ್ ಹಸ್ತಕ್ಷೇಪವನ್ನು ಅಧಿಕೃತಗೊಳಿಸುತ್ತದೆ ಎಂದು ತಂತ್ರವು ಹೇಳಿದೆ.

ವೆನಿಜುವೆಲಾ ವಿಶ್ವದ ಅತಿದೊಡ್ಡ ತೈಲ ನಿಕ್ಷೇಪಗಳನ್ನು ಹೊಂದಿದ್ದು, ಚೀನಾ ಅಗ್ರ ಪಾಲುದಾರ ರಾಷ್ಟ್ರವಾಗಿದೆ. ವೆನೆಜುವೆಲಾದ ಸಣ್ಣ ಹಡಗುಗಳಿಂದ ಮತ್ತು ಮಡುರೊ ಅವರಿಂದಲೇ ಮಾದಕ ವಸ್ತು ಕಳ್ಳಸಾಗಣೆ ನಡೆಯುತ್ತಿದೆ ಎಂದು ಆರೋಪಿಸಿ ಟ್ರಂಪ್ ಹಸ್ತಕ್ಷೇಪವನ್ನು ಸಮರ್ಥಿಸಿಕೊಂಡಿದ್ದರು. ಆದರೆ ಸಣ್ಣ ಪ್ರಾದೇಶಿಕ ರಾಷ್ಟ್ರದ ಮೇಲೆ ತನ್ನನ್ನು ತೊಡಗಿಸಿಕೊಳ್ಳಲು ಅಮೆರಿಕ ಬಯಸಲ್ಲ ಎಂದಿದ್ದರು.

2022 ರಿಂದ ರಷ್ಯಾ ಮತ್ತು ಉಕ್ರೇನ್ ನಡುವೆ ಸಂಘರ್ಷ ನಡೆಯುತ್ತಿದೆ. ಪ್ರಜಾಪ್ರಭುತ್ವ ರಾಷ್ಟ್ರವಾದ ತೈವಾನ್ ನಿಂದ ಸೇನೆ ಹಿಂತೆಗೆದುಕೊಳ್ಳಲು ನಿರಾಕರಿಸಿದ ಚೀನಾ, ದಕ್ಷಿಣ ಚೀನಾ ಸಮುದ್ರದ ಮೇಲೆ ಹೆಚ್ಚಿನ ಹಕ್ಕು ಇದೆ ಎಂದು ಹೇಳುವ ಮೂಲಕ ಯುಎಸ್ ಮಿತ್ರರಾಷ್ಟ್ರಗಳನ್ನು ಕೆರಳಿಸಿದೆ. ಪ್ರಮುಖ ಅಮೆರಿಕ ಸಶಸ್ತ್ರ ಡೀಲ್ ಆದ ನಂತರ ತೈವಾನ್ ಗೆ ಬಂದ್ ಮಾಡುವ ನಿಟ್ಟಿನಲ್ಲಿ ಚೀನಾ ಪ್ರಮುಖ ಮಿಲಿಟರಿ ಅಭ್ಯಾಸ ನಡೆಸಿದ ನಂತರ ವೆನೆಜುವೆಲಾ ಮೇಲೆ ದಾಳಿ ನಡೆದಿದೆ. ಹೀಗಾಗಿ ಇದು ಚೀನಾ ಮತ್ತು ರಷ್ಯಾಕ್ಕೆ ಅಮೆರಿಕ ನೀಡಿರುವ ವಾರ್ನಿಂಗ್ ಎನ್ನಲಾಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries