ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಪುತ್ತಿಗೆಯಲ್ಲಿ ಪತ್ನಿಗೆ ವೀಡಿಯೊ ಕರೆ ಮಾಡಿದ ನಂತರ ಯುವಕನೊಬ್ಬ ನೇಣುಬಿಗಿದು ಆತ್ಮಹತ್ಯೆಗೈದಿದ್ದಾನೆ. ಮೂಲತಃ ಶಿವಮೊಗ್ಗ ನಿವಾಸಿ, ಪುತ್ತಿಗೆ ಗ್ರಾಮ ಪಂಚಾಯಿತಿ ಕಚೇರಿ ಸಮೀಪ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿದ್ದ ರಿಸ್ವಾನ್ ಆಲಿ(32)ಮೃತ ವ್ಯಕ್ತಿ.
ಮರ ಕಡಿಯುವ ಕೆಲಸಕ್ಕೆ ಸಂಬಂಧಿಸಿ ಇವರು ಪುತ್ತಿಗೆಗೆ ಆಗಮಿಸಿ, ಇಲ್ಲಿನ ಕ್ವಾಟ್ರಸ್ ಒಂದರಲ್ಲಿ ವಾಸಿಸುತ್ತಿದ್ದರು. ಶುಕ್ರವಾರ ರಾತ್ರಿ ಪತ್ನಿಗೆ ಫೆÇೀನ್ ಕರೆ ಮಾಡಿ ತಾನು ಆತ್ಮಹತ್ಯೆಗೈಯುವುದಾಗಿ ತಿಳಿಸಿದ್ದರು. ಅಲ್ಪ ಹೊತ್ತಿನ ಬಳಿಕ ಪತ್ನಿ ಮರಳಿ ಕರೆಮಾಡಿದರೂ, ಸ್ವೀಕರಿಸದಿದ್ದಾಗ ಆತಂಕಗೊಂಡ ಅವರ ಕರೆಯನ್ನು ಸ್ವೀಕರಿಸುತ್ತಿರಲಿಲ್ಲ. ಈ ಬಗ್ಗೆ ರಿಸ್ವಾನ್ ಸ್ನೇಹಿತರಿಗೆ ನೀಡಿದ ಮಾಹಿತಿಯನ್ವಯ ಈತನ ಕೊಠಡಿಗೆ ಬಂದು ನೋಡಿದಾಗ ನೇಣಿನಲ್ಲಿ ನೇತಾಡುತ್ತಿರುವುದು ಕಂಡು ಬಂದಿತ್ತು. ತಕ್ಷಣ ಕೆಳಗಿಳಿಸಿ ಜಿಲ್ಲ ಸಹಕಾರಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಪತ್ನಿ ಮತ್ತು ಸಂಬಂಧಿಕರು ಶನಿವಾರ ಬೆಳಿಗ್ಗೆ ಕುಂಬಳೆ ತಲುಪಿದ್ದು, ಶವಮಹಜರಿನ ನಂತರ ಮೃತದೇಹ ಊರಿಗೆ ಕೊಮಡೊಯ್ದಿದ್ದಾರೆ. ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.


