ಸಮರಸ ಚಿತ್ರಸುದ್ದಿ: ಕಾಸರಗೋಡು: ಮಲಯಾಳಂ ಭಾಷಾ ಕಡ್ಡಾಯ ಮಸೂದೆ ವಿರೋಧಿ ಹೋರಾಟ ಸಮಿತಿ ವತಿಯಿಂದ ಜಿಲ್ಲೆಯ ಶಾಸಕರಾದ ಎಂ ರಾಜಗೋಪಾಲ್, ಅಡ್ವ. ಸಿ ಎಚ್ ಕುಞಂಬು, ಇ ಚಂದ್ರಶೇಖರನ್, ಎನ್.ಎ. ನೆಲ್ಲಿಕುನ್ನು ಹಾಗೂ ಎ.ಕೆ.ಎಂ. ಅಶ್ರಫ್ ಅವರಿಗೆ ಕನ್ನಡ ನೇತಾರು ಮನವಿ ಸಲ್ಲಿಸಿದರು.
ನಿಯೋಗದಲ್ಲಿ ಹೋರಾಟ ಸಮಿತಿಯ ಅಡ್ವ.ಮುರಲೀಧರ ಬಳ್ಳಕ್ಕುರಾಯ, ಕಸಾಪ ಕೇರಳ ಘಟಕಾಧ್ಯಕ್ಷ ಡಾ ಜಯಪ್ರಕಾಶ್ ನಾರಾಯಣ ತೋಟ್ಟೆತೋಡಿ, ಮುಖಂಡ ಟಿ. ಶಂಕರನಾರಾಯಣ ಭಟ್, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯಕಟ್ಟೆ ಜೊತೆಗಿದ್ದರು.


