HEALTH TIPS

ಇಂದು ಕಾಸರಗೋಡು ಕನ್ನಡ ಭವನ ರಜತ ಸಂಭ್ರಮ ಸಮಾರಂಭ-ನಾಡು - ನುಡಿ ಹಬ್ಬ, ವಿವಿಧ ಪ್ರಶಸ್ತಿ ಪ್ರದಾನ

ಕಾಸರಗೋಡು: ನಗರದ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಗ್ರಂಥಾಲಯದ ಬಯಲು ರಂಗ ಮಂದಿರದಲ್ಲಿ ಕಾಸರಗೋಡಿನ ಕನ್ನಡ ಭವನದ ರಜತ ಸಂಭ್ರಮ, ನಾಡು-ನುಡಿ ಹಬ್ಬ, ಸಾಧಕರಿಗೆ ವಿವಿಧ ಪ್ರಶಸ್ತಿ ಪ್ರದಾನ, ಕೃತಿ ಬಿಡುಗಡೆ ಸಮಾರಂಭ ಜ. 18ರಂದು ನಡೆಯಲಿದೆ. 


ಬೆಳಗ್ಗೆ 7.30ರಿಂದ ಕಾಸರಗೋಡಿನ ವಿಶ್ವಕರ್ಮ ಭಜನಾ ಸಂಘದ ಸದಸ್ಯರಿಂದ ಭಜನಾ ಸಂಕೀರ್ತನೆ ನಡೆಯಲಿದ್ದು, ಧಾರ್ಮಿಕ ಮುಖಂಡ ಡಾ. ಕೆ ಎನ್ ವೆಂಕಟ್ರಮಣ ಹೊಳ್ಳ ದೀಪ ಬೆಳಗಿಸುವ ಊಲಕ ಚಾಲನೆ ನೀಡುವರು.  ಕನ್ನಡ ಭವನದ ಸ್ಥಾಪಕಾಧ್ಯಕ್ಷ ಡಾ. ಕೆ ವಾಮನ್ ರಾವ್ ಬೇಕಲ್ ಅಧ್ಯಕ್ಷತೆ ವಹಿಸುವರು. ಸಾಹಿತಿ ಆಯಿಷಾ ಪೆರ್ಲ ದಿಕ್ಸೂಚಿ ಭಾಷಣ ಮಾಡುವರು. ಹಿರಿಯ ಪತ್ರಕರ್ತ ಪ್ರದೀಪ್ ಬೇಕಲ್ ಪ್ರಾಸ್ತಾವಿಕವಾಗಿ ಮಾತನಾಡುವರು.   ಮೈಸೂರಿನ ಡಾ. ಎಂ. ಜಿ. ಆರ್ ಅರಸ್ ಕನ್ನಡ ಭುವನೇಶ್ವರಿಯ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡುವರು. ಡಾ.ರತ್ನಾ ಹಾಲಪ್ಪ ಗೌಡ ಕನ್ನಡ ಧ್ವಜಾರೋಹಣ ಮಾಡುವರು.  

ಶಿಕ್ಷಣ ತಜ್ಞ ವಿ ಬಿ ಕುಳಮರ್ವ, ಕಸಾಪ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಕರ್ನಾಟಕ ಸರ್ಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ ಆರ್ ಸುಬ್ಬಯ್ಯಕಟ್ಟೆ, ಅರಿಬೈಲು ಗೋಪಾಲ ಶೆಟ್ಟಿ, ಪಮ್ಮಿ ಕೊಡಿಯಾಲಬೈಲ್, ಸಾಹಿತಿಗಳಾದ ಜಯಾನಂದ ಪೆರಾಜೆ, ವಿರಾಜ್ ಅಡೂರು, ರವಿ ನಾಯ್ಕಾಪು, ಶ್ರೀಧರ ಶೆಟ್ಟಿ ಮುಟ್ಟಂ, ಸಂಧ್ಯಾರಾಣಿ ಟೀಚರ್, ವಿಶಾಲಾಕ್ಷ ಪುತ್ರಕಳ, ಉಮೇಶ್ ರಾವ್ ಕುಂಬ್ಳೆ ಭಾಗವಹಿಸುವರು.  

ಈ ಸಂದರ್ಭ ಕನ್ನಡದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ವಿವಿಧ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕ್ಯಾಪ್ಟನ್ ಗಣೇಶ ಕಾರ್ಣಿಕ್, ಪ್ರದೀಪ್ ಕುಮಾರ ಕಲ್ಕೂರಾ, ಬೊಳ್ಳಜಿರ ಬಿ ಅಯ್ಯಪ್ಪ, ರುಬೀನಾ ಎಂ ಎ ಪ್ರಶಸ್ತಿ ಪ್ರದಾನ ಮಾಡುವರು. ಕಾರ್ಯಕ್ರಮದಲ್ಲಿ ಗುರುರಾಜ್ ಕಾಸರಗೋಡು ಸಾರಥ್ಯದ ಗಡಿನಾಡ ಸಾಂಸ್ಕøತಿಕ ಕಲಾ ವೇದಿಕೆಯ ಸದಸ್ಯರಿಂದ ನೃತ್ಯ ವೈಭವ, ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಸದಸ್ಯರಿಂದ ಯಕ್ಷಗುರು ಬಾಯಾರು ಸೂರ್ಯನಾರಾಯಣ ಪದಕಣ್ಣಾಯರ ನಿರ್ದೇಶನದಲ್ಲಿ ಯಕ್ಷಗಾನ ಬಯಲಾಟ ನಡೆಯಲಿದೆ. 

ಸಮಾರೋಪ ಸಮಾರಂಭದಲ್ಲಿ  ಎಚ್ ಆರ್ ಶಶಿಧರ ನಾಯ್ಕ್ ಅಧ್ಯಕ್ಷತೆ ವಹಿಸುವರು.   ಡಾ. ರವೀಂದ್ರ ಜೆಪ್ಪು, ಜಿ. ಕೆ ರಾವ್ ಮಂಗಳೂರು, ಡಾ. ಪ್ರಭಾಕರ ರಾವ್, ಡಾ. ಬಾಲಕೃಷ್ಣ ಎಸ್ ಮುದ್ದೋಡಿ, ಕೆ. ಶ್ರೀನಿವಾಸ ಸೆರ್ವೆಗಾರ ಹೆಬ್ರಿ, ವೆಂಕಟ್ರಮಣ ಬೀರಂತಬೈಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ರಾಜೇಶ್ ಕೋಟೆಕಣಿ ಮತ್ತು ರೇಖಾ ಸುದೇಶ್ ರಾವ್ ಪಾಲ್ಗೊಳ್ಳುವರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries