ಕುಂಬಳೆ: ಅರಿಕ್ಕಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಿರ್ಮಿಸಿರುವ ಟೋಲ್ ಪ್ಲಾಜ್ಹಾದ ವಿರುದ್ಧ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಅವರನ್ನು ಗುರುವಾರ ಬೆಳಿಗ್ಗೆ ಪೋಲೀಸರು ಬಂಧಿಸಿದರು. ಕುಂಬಳೆಯಲ್ಲಿ ಪ್ರತಿಭಟನಾ ಟೆಂಟ್‍ನಲ್ಲಿ ಬಂಧಿಸಲಾಯಿತು. ಬಳಿಕ ಪೋಲೀಸರು ಪ್ರತಿಭಟನಾ ಟೆಂಟ್ ಅನ್ನು ಕೆಡವಿದರು.
ಟೋಲ್ ಸಂಗ್ರಹ ನಿಲ್ಲಿಸುವಂತೆ ಒತ್ತಾಯಿಸಿ ಶಾಸಕರ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಆಹೋರಾತ್ರಿ ಪ್ರತಿಭಟನೆಗೆ ಈ ಪ್ರದೇಶದಲ್ಲಿ ಪ್ರಬಲ ಬೆಂಬಲ ವ್ಯಕ್ತವಾಗುತ್ತಿದ್ದು ಪೋಲೀಸ್ ಕ್ರಮ ಕೈಗೊಳ್ಳಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಪ್ರತಿಭಟನೆಯನ್ನು ರಾಷ್ಟ್ರೀಯ ಹೆದ್ದಾರಿಯಿಂದ ತೆರವುಗೊಳಿಸುವಂತೆ ಒತ್ತಾಯಿಸಿ ಪೋಲೀಸರಿಗೆ ದೂರು ನೀಡಿತ್ತು. ಇದರ ಆಧಾರದ ಮೇಲೆ, ಪೋಲೀಸರು ಈ ಹಿಂದೆ ಶಾಸಕರಿಗೆ ನೋಟಿಸ್ ನೀಡಿದ್ದರು.
ನೋಟಿಸ್ ಸ್ವೀಕರಿಸಿದರೂ ಪ್ರತಿಭಟನಾಕಾರರು ಚದುರಿಹೋಗದ ಕಾರಣ ಬಂಧನಗಳನ್ನು ಮಾಡಲಾಗಿದೆ ಎಂದು ಪೋಲೀಸರು ವಿಜಯವಾಣಿಗೆ ತಿಳಿಸಿದ್ದಾರೆ. ಬಂಧಿತ ಶಾಸಕರನ್ನು ಕಾಸರಗೋಡು ಎಆರ್ ಶಿಬಿರಕ್ಕೆ ಕರೆದೊಯ್ಯಲಾಯಿತು.
ಬಂಧನದ ನಂತರ, ಪ್ರತಿಭಟನಾ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಕಾರ್ಯಕರ್ತರು ಮತ್ತು ಸ್ಥಳೀಯರು ಪ್ರತಿಭಟನೆಯನ್ನು ತೀವ್ರಗೊಳಿಸಿದರು. ಕುಂಬಳೆ ಟೋಲ್ ಪ್ಲಾಜಾದಿಂದ ಹಣ ಸಂಗ್ರಹ ನಿಲ್ಲಿಸುವುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿದೆ. ಶಾಸಕರ ಬಂಧನವನ್ನು ವಿರೋಧಿಸಿ ಪ್ರತಿಭಟನಾ ಸಮಿತಿಯು ಪ್ರತಿಭಟನೆ ತೀವ್ರಗೊಳಿಸುವುದಾಗಿ ಘೋಷಿಸಿದೆ.
ಕನಲಿದ ಮುಷ್ಕರ:
ಚಳವಳಿಗೆ ಬೆಂಬಲ ಸೂಚಿಸಿ ಮುಸ್ಲಿಂ ಯೂತ್ ಲೀಗ್, ಡಿವೈಎಫ್‍ಐ ಕಾರ್ಯಕರ್ತರು ಮೆರವಣಿಗೆಯೊಂದಿಗೆ ಬುಧವಾರ ರಾತ್ರಿ ಆಗಮಿಸಿದಾಗ ಸಂಘರ್ಷ ಸ್ಥಿತಿ ಹುಟ್ಟಿಕೊಂಡಿತ್ತು. ರಾತ್ರಿ 8.30ರ ವೇಳೆ ಮೆರವಣಿಗೆ ಅಲ್ಲಿಗೆ ತಲುಪಿದೊಡನೆ ಚಳವಳಿ ನಿರತರು ಟೋಲ್ ಬೂತ್‍ನ ಕ್ಯಾಮರಾ ಹಾಗೂ ಗೇಟ್‍ನ್ನು ಮುರಿದು ಹಾಕಿದ್ದಾರೆ. ವಾಹನಗಳನ್ನು ತಡೆಯುವ ಟೋಲ್ ಬೂತ್‍ನ ಹ್ಯಾಂಡಲ್‍ಗಳನ್ನು ಕೂಡಾ ಹಾನಿಗೊಳಿಸಲಾಗಿದೆ. ಸ್ಕ್ಯಾನರ್‍ಗಳಿಗೆ ಕಪ್ಪು ಪ್ಲಾಸ್ಟಿಕ್ ಅಂಟಿಸಲಾಗಿದೆ. ಘಟನೆ ಸಂದರ್ಭದಲ್ಲಿ ಸುಮಾರು 2 ಸಾವಿರದಷ್ಟು ಮಂದಿ ಅಲ್ಲಿ ಜಮಾಯಿಸಿದ್ದರೆಂದು ಹೇಳಲಾಗುತ್ತಿದೆ. ಆದರೆ ಕೇವಲ 20 ರಷ್ಟು ಪೆÇಲೀಸರು ಮಾತ್ರವೇ ಸ್ಥಳದಲ್ಲಿ ಇದ್ದರೆನ್ನಲಾಗಿದೆ. ವಾಹನಗಳಿಂದ ಟೋಲ್ ಸಂಗ್ರಹ ವಿರುದ್ಧ ಮಂಗಳವಾರದಿಂದ ಪ್ರತಿಭಟನೆ ಆರಂಭಗೊಂಡಿದೆ. ಬುಧವಾರ ಅನಿರ್ದಿಷ್ಟಾವಧಿ ಚಳವಳಿ ಎರಡನೇ ದಿನಕ್ಕೆ ಕಾಲಿರಿಸಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಕಲೆಕ್ಟರೇಟ್‍ನಲ್ಲಿ ಶಾಸಕರ ಹಾಗೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಸಭೆ ಜಿಲ್ಲಾಧಿಕಾರಿ ಉಪ ಸ್ಥಿತಿಯಲ್ಲಿ ನಡೆದಿದ್ದರೂ ಯಾವುದೇ ತೀರ್ಮಾನ ಕೈಗೊಳ್ಳಲಾಗಿಲ್ಲ. ಇದೇ ಸಂದರ್ಭದಲ್ಲಿ ವಿಧಾನಸಭಾ ಅಧಿವೇಶನ ವೇಳೆ ಚೀಫ್ ಸೆಕ್ರೆಟರಿ ಉಪಸ್ಥಿತಿಯಲ್ಲಿ ಈ ವಿವಾದವನ್ನು ಚರ್ಚೆ ನಡೆಸಬಹುದೆಂಬ ಒಪ್ಪಂದ ಮೇರೆಗೆ ಸಭೆ ಕೊನೆಗೊಂಡಿತ್ತು. ವಿವಾದಕ್ಕೆ ಸಂಬಂಧಿಸಿ ಹೈಕೋರ್ಟ್‍ನ ಪರಿಗಣನೆಯಲ್ಲಿರುವ ಪ್ರಕರಣದಲ್ಲಿ ನಿರ್ಧಾರ ಉಂಟಾಗುವ ವರೆಗೆ ಟೋಲ್ ಸಂಗ್ರಹ ನಿಲುಗಡೆಗೊಳಿಸಬೇಕೆಂದು ಶಾಸಕ ಬೇಡಿಕೆ ಮುಂದಿರಿಸಿದ್ದು ಆದರೆ ಸಭೆ ಮೌನ ಪಾಲಿಸಿರುವುದಾಗಿ ಆರೋಪವುಂಟಾಗಿದೆ.
ಟೋಲ್ ಬೂತ್ ಮುಷ್ಕರ ಬುಧವಾರ ರಾತ್ರಿ ಹಿಂಸಾಚಾರಕ್ಕೆ ತಿರುಗಿದ ಬಳಿಕ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದರೂ, ಗುರುವಾರ ಮುಷ್ಕರ ಪುನರಾರಂಭಗೊಂಡಿತು ಎಂದು ಪ್ರತಿಭಟನಾ ಸಮಿತಿ ತಿಳಿಸಿದೆ. ಈ ನಿಟ್ಟಿನಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಪ್ರತಿಭಟನಾ ಸಮಿತಿಯ ತುರ್ತು ಸಭೆ ನಡೆಯಲಿದೆ. ಮುಷ್ಕರದಿಂದ ಹಿಂದೆ ಸರಿಯುವ ಅಗತ್ಯವಿಲ್ಲ ಎಂಬುದು ಈವರೆಗೂ ತಳೆದ ನಿಲುವಾಗಿದೆ.
ಟೋಲ್ ಬೂತ್‍ನಲ್ಲಿ ಕ್ಯಾಮೆರಾಗಳು, ಕಿಟಕಿ ಗಾಜುಗಳು ಮತ್ತು ಗೇಟ್‍ಗಳನ್ನು ಒಡೆದ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ದೂರು ಬಂದರೆ, ಸಾರ್ವಜನಿಕ ಆಸ್ತಿ ನಾಶ ಸೇರಿದಂತೆ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಪೆÇಲೀಸರು ತಿಳಿಸಿದ್ದಾರೆ. ಪ್ರಸ್ತುತ, ಕುಂಬಳೆ ಪೋಲೀಸರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡ್ಡಿಪಡಿಸಿದ ಸುಮಾರು 500 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬುಧವಾರ ರಾತ್ರಿ ಪೋಲೀಸರು ನೋಡುತ್ತಿರುವಂತೆಯೇ ಹಿಂಸಾತ್ಮಕ ಘಟನೆಗಳು ನಡೆದಿವೆ.
ಅನ್ಯಾಯದ ಟೋಲ್ ಸಂಗ್ರಹದ ವಿರುದ್ಧ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ನೇತೃತ್ವದಲ್ಲಿ ನಡೆದ ಅನಿರ್ದಿಷ್ಟ ಮುಷ್ಕರದ ಬುಧವಾರ ರಾತ್ರಿ ಹಿಂಸಾತ್ಮಕ ಘಟನೆಗಳು ನಡೆದವು. ಬಿಜೆಪಿ ಹೊರತುಪಡಿಸಿ ವಿವಿಧ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಲು ಹೋರಾಟ ಸಮಿತಿ ಮುಷ್ಕರ ನಡೆಸುತ್ತಿರುವಲ್ಲಿಗೆ ಹರಿದು ಬರುತ್ತಿದ್ದಾರೆ. ಇದು ದೊಡ್ಡ ಜನಸಂದಣಿಗೆ ಕಾರಣವಾಯಿತು. ಸುಮಾರು 100 ಜನರ ಪೋಲೀಸ್ ಪಡೆ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ.
ಸಮಾಜ ವಿರೋಧಿ ಅಂಶಗಳು ನುಸುಳಿರುವ ಶಂಕೆ:
ಸಮಾಜ ವಿರೋಧಿ ಅಂಶಗಳು ಏಕತಾ ಮೆರವಣಿಗೆಗಳಲ್ಲಿ ನುಸುಳಿ ಉದ್ದೇಶಪೂರ್ವಕವಾಗಿ ಅವ್ಯವಸ್ಥೆಯನ್ನು ಸೃಷ್ಟಿಸಿವೆ ಎಂದು ಪ್ರತಿಭಟನಾ ಸಮಿತಿ ಆರೋಪಿಸಿದೆ. ಆದಾಗ್ಯೂ, ಪೆÇಲೀಸರು ಈ ವಾದವನ್ನು ಅಕ್ಷರಶಃ ತೆಗೆದುಕೊಂಡಿಲ್ಲ.
ಕುಂಬಳೆ ಪೋಲೀಸ್ ಇನ್ಸ್‍ಪೆಕ್ಟರ್ ಮುಕುಂದನ್ ಟಿ.ಕೆ ಅವರು ಸೆಕ್ಷನ್ 181(2), 189(3), 191(2) ಇತ್ಯಾದಿಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬಂಧಿಸಿದ್ದು ಯಾರನ್ನೆಲ್ಲ?
ಶಾಸಕ ಎಕೆಎಂ ಅಶ್ರಫ್, ಪಂ. ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್ ಹಾಜಿ, ಬ್ಲಾಕ್ ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಳೆ, ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಎ.ಕೆ. ಆರಿಫ್, ಸಿಪಿಎಂ ಏರಿಯಾ ಸೆಕ್ರೆಟರಿ ಸಿ.ಎ.ಸುಬೈರ್, ಕಾಂಗ್ರೆಸ್ ನೇತಾರ ಲಕ್ಷ್ಮಣ ಪ್ರಭು ಮೊದಲಾದವರನ್ನು ಪೆÇಲೀಸರು ಬಂಧಿಸಿದ್ದಾರೆ.

.jpg)
.jpg)
