ತಿರುವನಂತಪುರಂ: ಪದೇ ಪದೇ ಲೈಂಗಿಕ ಅಪರಾಧಗಳನ್ನು ಮಾಡುತ್ತಿರುವ ಮನೋರೋಗಿ ರಾಹುಲ್ ಮಾಂಕೂಟತ್ತಿಲ್ ಅವರನ್ನು ತಿರಸ್ಕರಿಸಲು ಇನ್ನೂ ಸಿದ್ಧವಿಲ್ಲದ ಕಾಂಗ್ರೆಸ್‍ನ ನಾಚಿಕೆಯಿಲ್ಲದ ವಿಧಾನದ ವಿರುದ್ಧ ಕೇರಳದ ಎಲ್ಲಾ ಮಹಿಳೆಯರು ಪ್ರತಿಭಟಿಸಬೇಕು ಎಂದು ಉನ್ನತ ಶಿಕ್ಷಣ ಸಚಿವೆ ಆರ್ ಬಿಂದು ಹೇಳಿದ್ದಾರೆ.
ಸಚಿವರು ಫೇಸ್‍ಬುಕ್ ಮೂಲಕ ಈ ಪ್ರತಿಕ್ರಿಯೆ ನೀಡಿದ್ದಾರೆ. ಪೇಸ್‍ಬುಕ್ ಪೆÇೀಸ್ಟ್‍ನ ಪೂರ್ಣ ಪಠ್ಯ:
ಹಲವು ಮಹಿಳೆಯರನ್ನು ಹೇಯ, ನೀಚ ಮತ್ತು ಹಿಂಸಾತ್ಮಕ ಲೈಂಗಿಕ ದೌರ್ಜನ್ಯಗಳಿಗೆ ಬಲಿಪಶುಗಳನ್ನಾಗಿ ಮಾಡಿದ, ಕ್ರೂರ ಅತ್ಯಾಚಾರದ ಮೂಲಕ ಅವರನ್ನು ಗರ್ಭಿಣಿಯನ್ನಾಗಿ ಮಾಡಿದ ಮತ್ತು ನಂತರ ಅವರನ್ನು ಬಲವಂತವಾಗಿ ಗರ್ಭಚ್ಚಿದ್ರಕ್ಕೊಳಪಡಿಸಿದ ವ್ಯಕ್ತಿಯನ್ನು ತಿರಸ್ಕರಿಸಲು ಇನ್ನೂ ಸಿದ್ಧವಿಲ್ಲದ ಕಾಂಗ್ರೆಸ್‍ನ ನಾಚಿಕೆಯಿಲ್ಲದ ವಿಧಾನದ ವಿರುದ್ಧ ಕೇರಳದ ಎಲ್ಲಾ ಮಹಿಳೆಯರು ಪ್ರತಿಭಟಿಸಬೇಕು! ಕೇರಳ ರಾಜಕೀಯದಲ್ಲಿ ಕೇಳಿರದ ರೀತಿಯಲ್ಲಿ ಕ್ರೂರ ಲೈಂಗಿಕ ಅಪರಾಧಗಳನ್ನು ಪದೇ ಪದೇ ಮಾಡಿರುವ ಇಂತಹ ಮನೋರೋಗಿ ಶಾಸಕಾಂಗ ಸಭೆಯಲ್ಲಿ ಇನ್ನೂ ಇರುವುದು ಕೇರಳ ವಿಧಾನಸಭೆಗೆ ಅವಮಾನ. ಸಂತ್ರಸ್ಥೆಯರೊಂದಿಗೆ ಬೆಂಬಲವಾಗಿದ್ದೇವೆ.....ಎಮದು ಸಚಿವರು ಬರೆದಿದ್ದಾರೆ.

