ಕಾಸರಗೋಡು: ತ್ರಿಶೂರ್‍ನಲ್ಲಿ ನಡೆಯಲಿರುವ ರಾಜ್ಯ ಶಾಲಾ ಕಲೋತ್ಸವದ ಬಂಗಾರದ ಟ್ರೋಫಿಯ ಮೆರವಣಿಗೆ ಬುಧವಾರ ಬೆಳಿಗ್ಗೆ 8 ಗಂಟೆಗೆ ಕಾಸರಗೋಡು ಮೊಗ್ರಾಲ್ ಸರ್ಕಾರಿ ವೃತ್ತಿಪರ ಪ್ರೌಢಶಾಲೆಯಿಂದ ಆರಂಭಗೊಳ್ಳಲಿದೆ. ಜಿಲ್ಲಾ ಶಾಲಾ ಕಲೋತ್ಸವ ನಡೆದ ಮೊಗ್ರಾಲ್ ಶಾಲಾ ವಠಾರದಿಂದ ಟ್ರೋಫಿಯ ಮೆರವಣಿಗೆ ಆರಂಭಗೊಳ್ಳುವುದು ವಿಶೇಷತೆಯಾಗಿದೆ.
ಜನವರಿ 13 ರಂದು ಸಂಜೆ 6ಕ್ಕೆ ರಾಜ್ಯ ಶಾಲಾ ಕಲೋತ್ಸವ ನಡೆಯುವ ಮುಖ್ಯ ಸ್ಥಳವಾದ ತ್ರಿಶೂರ್‍ನ ತೆಕ್ಕಿನ್ಕಾಡು ಮೈದಾನಕ್ಕೆ ಚಿನ್ನದ ಟ್ರೋಫಿಯ ಮೆರವಣಿಗೆ ತಲುಪಲಿದೆ. ಜ. 14 ರಿಂದ ರಾಜ್ಯಮಟ್ಟದ ಶಾಲಾಕಲೋತ್ಸವ ಆರಂಭವಾಗಲಿದೆ.
ಚಿನ್ನದ ಟ್ರೋಫಿ ಯಾತ್ರೆಗೆ 36 ಕೇಂದ್ರಗಳಲ್ಲಿ ಸ್ವಾಗತ ಕಾರ್ಯಕ್ರಮ ನಡೆಯಲಿದ್ದು, ಪ್ರತಿ ದಿನದ ಪ್ರಯಾಣದ ಕೊನೆಯಲ್ಲಿ ಟ್ರೋಫಿಯನ್ನು ಉಪ ಖಜಾನೆಯ ತಿಜೋರಿಯಲ್ಲಿರಿಸಲಾಗುವುದು. 117.5 ಪೌಂಡ್ ತೂಕದ ಚಿನ್ನದ ಟ್ರೋಫಿಯನ್ನು ಪೆÇಲೀಸ್ ಬೆಂಗಾವಲಿನೊಂದಿಗೆ ಸಾಗಿಸಲಾಗುತ್ತಿದೆ.

