ಕಾಸರಗೋಡು: ಕೋಝಿಕ್ಕೋಡ್ ಸೇನಾ ನೇಮಕಾತಿ ಕಚೇರಿ ಆಯೋಜಿಸಿರುವ ಅಗ್ನಿವೀರ್ ವರ್ಗದ ನೇಮಕಾತಿ ರ್ಯಾಲಿ ಕಾಸರಗೋಡು ನಗರಸಭಾ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭಗೊಂಡಿತು. ಲಕ್ಷದ್ವೀಪ, ಮಾಹೆ ಒಳಗೊಮಡ ಕೇಂದ್ರಾಡಳಿತ ಪ್ರದೇಶ ಮತ್ತು ಕಾಸರಗೋಡಿನಿಂದ ತ್ರಿಶೂರ್‍ವರೆಗಿನ ಏಳು ಜಿಲ್ಲೆಗಳ ವಿವಿಧ ಭಾಗಗಳಿಂದ ಆಗಮಿಸಿರುವ ಅಭ್ಯರ್ಥಿಗಳು ಸೇನಾ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸುತ್ತಿದ್ದಾರೆ.
ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ(ಎಡಿಎಂ) ಪಿ.ಅಖಿಲ್ ನೇಮಕಾತಿ ರ್ಯಾಲಿಗೆ ಚಾಲನೆ ನೀಡಿದರು. ರಿಕ್ರೂಟ್‍ಮೆಂಟ್ ಡೆಪ್ಯುಟಿ ಡೈರೆಕ್ಟರ್ ಬ್ರಿಗೇಡಿಯರ್ ಎಸ್.ಕೆ ಸಿಂಗ್, ಐ.ವಿ.ಎಸ್ ರಂಗನಾಥ್, ಸೋಮು ಮಹಾರಾಜನ್ ಮೊದಲಾದವರು ಉಪಸ್ಥೀತರಿದ್ದರು.
ಜನವರಿ 6 ರಿಂದ 12 ರವರೆಗೆ ಕಾಸರಗೋಡು ವಿದ್ಯಾನಗರದ ನಗರಸಭಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಭ್ಯರ್ಥಿಗಳ ದಾಖಲಾತಿಯೊಂದಿಗೆ ದೈಹಿಕ ಸಾಮಥ್ರ್ಯ ಪರೀಕ್ಷೆ ಮತ್ತು ಫಿಟ್ನೆಸ್ ಪರೀಕ್ಷೆಯನ್ನು ನಡೆಸಲಾಯಿತು. ಕೋಯಿಕ್ಕೋಡ್ ಸೇನಾ ನೇಮಕಾತಿ ಕಚೇರಿಯ ಮೇಲ್ವಿಚಾರಣೆಯಲ್ಲಿ ರ್ಯಾಲಿ ನಡೆಯುತ್ತಿದ್ದು, ಆನ್‍ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಈಪರೀಕ್ಷೆ ಆಯೋಜಿಸಲಾಗುತ್ತಿದೆ.


