ಕಾಸರಗೋಡು: ನಗರದ ಹೊಸ ಬಸ್ ನಿಲ್ದಾಣ ವಠಾರದಲ್ಲಿ ಮಂಗಳವಾರ ಸ್ಕೂಟರ್ ಮತ್ತು ಲಾರಿ ಡಿಕ್ಕಿಯಾಗಿ ಸ್ಟೇಟ್ ಸ್ಪೆಶ್ಯಲ್ ಬ್ರಾಂಚ್(ಎಸ್‍ಎಸ್‍ಬಿ) ಕಚೇರಿಯ ಅರೆಕಾಲಿಕ ನೌಕರ ಮುಳಿಯಾರಿನ ಬಾವಿಕ್ಕೆರೆ ನಿವಾಸಿ ಬಾಬುರಾಜ್ ಎಂಬವರು ಗಂಭೀರ ಗಾಯಗೊಂಡಿದ್ದಾರೆ. ಇವರನ್ನು ಚೆಂಗಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿದ್ಯಾನಗರದ ಕಚೇರಿಗೆ ತೆರಳುವ ಮಧ್ಯೆ ಹೊಸ ಬಸ್ ನಿಲ್ದಾಣ ಸನಿಹದ ಸರ್ಕಲ್ ಬಳಿ ತಲುಪಿದಾಗ ಮಂಗಳೂರು ಭಾಗದಿಂದ ಆಗಮಿಸಿದ ಸರಕುಸಾಗಾಟದ ಲಾರಿ ಪರಸ್ಪರ ಡಿಕ್ಕಿಯಾಘಿದೆ. ಅಪಘಾತದಿಂದ ಬಾಬುರಾಜ್ ಅವರು ಲಾರಿಯ ಮುಂಭಾಗದ ಟಯರಿನ ಅಡಿಗೆ ಸಿಲುಕಿದ್ದು, ಕಾಲಿಗೆ ಗಂಭೀರ ಗಾಯಗಳುಂಟಾಗಿದೆ, ಸ್ಥಳದಲ್ಲಿದ್ದವರು ಇವರನ್ನು ಹೊರತೆಗೆಯಲು ಪ್ರಯತ್ನಿಸಿದರೂ, ಸಾಧ್ಯವಾಗದಿದ್ದಾಗ ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ನಡೆಸಿದೆ.

