ಕಾಸರಗೋಡು: ನೇಣು ಬಿಗಿದು ಗಂಭೀರಾವಸ್ಥೆಯಲ್ಲಿದ್ದ ಕಾಲೇಜು ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಯ ಪುಲ್ಲೂರ್ ಕೇಳೋತ್ ಅಕ್ಕರಮ್ಮಲ್ ನಿವಾಸಿ ಕೆ. ಕೃಷ್ಣನ್-ಶೀಜಾ ದಂಪತಿ ಪುತ್ರಿ, ಪರವನಡ್ಕ ಎಂಆರ್‍ಎಸ್ ಶಾಲಾ ಪ್ಲಸ್‍ವನ್ ವಿದ್ಯಾರ್ಥಿನಿ ಕೆ. ರೂಪಿಕಾ(16)ಮೃತಪಟ್ಟ ವಿದ್ಯಾರ್ಥಿನಿ.
ಸೋಮವಾರ ಮಧ್ಯಾಹ್ನ ರೂಪಿಕಾಳನ್ನು ಮನೆಯೊಳಗೆ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದ್ದು, ತಕ್ಷಣ ಕೆಳಗಿಳಿಸಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಅಸಹಜ ಸಾವಿನ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

