HEALTH TIPS

ಫೋಟೋ ತೆಗೆಯುವ ಹುಚ್ಚಿಗೆ ಕಣ್ಮರೆಯಾದ ವಿನಾಶದಂಚಿನಲ್ಲಿರುವ ಗ್ಯಾಲಕ್ಸಿ ಕಪ್ಪೆ!

ಕೊಚ್ಚಿ: ಪೊಟೋಗ್ರಾಫರ್‌ಗಳ ದಾಳಿಯಿಂದ ಗ್ಯಾಲಕ್ಸಿ ಕಪ್ಪೆಗಳ ವರ್ತನೆಯಲ್ಲಿ ಬದಲಾವಣೆಗಳಾಗಿರಬಹುದು; ಆಹಾರ ಸೇವನೆ ಮತ್ತು ಸಂತಾನೋತ್ಪತ್ತಿಗೆ ಧಕ್ಕೆಯಾಗಿರಬಹುದು ಎಂದು ಅಂದಾಜಿಸಲಾಗಿದೆ.

ಅಧ್ಯಯನವೊಂದರ ಪ್ರಕಾರ ಕೇರಳದ ದಟ್ಟಾರಣ್ಯದಲ್ಲಿದ್ದ ಏಳು ಗ್ಯಾಲಕ್ಸಿ ಕಪ್ಪೆಗಳು ಕಣ್ಮರೆಯಾಗಿವೆ ಅಥವಾ ಸತ್ತು ಹೋಗಿವೆ.

ಅನೇಕ ಫೋಟೋಗ್ರಾಫರ್‌ಗಳು ಫೋಟೋ ತೆಗೆಯಲೆಂದು ಲಗ್ಗೆ ಇಟ್ಟ ಪರಿಣಾಮ ಗ್ಯಾಲಕ್ಸಿ ಕಪ್ಪೆಗಳ ಆವಾಸಸ್ಥಾನಕ್ಕೆ ಧಕ್ಕೆಯಾಗಿತ್ತು.

►ಫೋಟೋಗ್ರಫಿಯಿಂದ ಗ್ಯಾಲಕ್ಸಿ ಕಪ್ಪೆಗಳ ಕಣ್ಮರೆ

"ಅನೈತಿಕ ವನ್ಯಜೀವಿ ಛಾಯಾಗ್ರಹಣವು ಪಶ್ಚಿಮ ಘಟ್ಟಗಳ ಸ್ಥಳೀಯ ಗ್ಯಾಲಕ್ಸಿ ಕಪ್ಪೆಯಾದ ಮೆಲನೊಬಾಟ್ರಕಸ್ ಇಂಡಿಕಸ್ ಬೆಡ್ಡೊಮ್, 1878 ಅನ್ನು ಅಪಾಯಕ್ಕೆ ಸಿಲುಕಿಸಿದೆ" ಎಂಬ ಶೀರ್ಷಿಕೆಯಲ್ಲಿ 2025 ಡಿಸೆಂಬರ್ 17ರಂದು ಹರ್ಪಿಟಾಲಜಿ ನೋಟ್ಸ್ ಜರ್ನಲ್‌ನಲ್ಲಿ ಈ ಕಪ್ಪೆಗಳ ಕುರಿತು ಲೇಖನ ಪ್ರಕಟವಾಗಿದೆ.

ಲಂಡನ್‌ನ ಪ್ರಾಣಿಶಾಸ್ತ್ರ ಸಮಾಜದ ಅಧ್ಯಯನಕಾರರಾದ ಕೆ.ಪಿ. ರಾಜ್‌ಕುಮಾರ್, ಬೆಂಜಮಿನ್ ಟ್ಯಾಪ್ಲಿ, ಜ್ಯೋತಿ ದಾಸ್ ಹಾಗೂ ಸಂದೀಪ್ ದಾಸ್ ಈ ಅಪರೂಪದ ಕಪ್ಪೆ ಪ್ರಭೇದಗಳ ಬಗ್ಗೆ ಅಧ್ಯಯನ ನಡೆಸಿದ್ದರು. ಇವರ ಜೊತೆಗೆ ತ್ರಿಶೂರ್ ಮೂಲದ 'ಅರಣ್ಯಕಂ ನೇಚರ್ ಫೌಂಡೇಶನ್'ನ ಅಧ್ಯಕ್ಷೆ ಪಿ.ಎಸ್. ಈಶಾ ಅವರೂ ಅಧ್ಯಯನ ತಂಡದಲ್ಲಿದ್ದರು. ಅರಣ್ಯಕಂ ನೇಚರ್ ಫೌಂಡೇಶನ್ ಒಂದು ಸರ್ಕಾರೇತರ ಸಂಸ್ಥೆಯಾಗಿದ್ದು, ಜೀವವೈವಿಧ್ಯ ಸಂರಕ್ಷಣೆಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತದೆ.

ಅಧ್ಯಯನಕಾರರ ಪ್ರಕಾರ ಏಳು ಗ್ಯಾಲಕ್ಸಿ ಕಪ್ಪೆಗಳು ಕಣ್ಮರೆಯಾಗಿವೆ. ಬಹುಶಃ ಎಲ್ಲಾ ಕಪ್ಪೆಗಳೂ ಸಾವನ್ನಪ್ಪಿರುವ ಸಾಧ್ಯತೆಯಿದೆ. ಅನೇಕ ಫೋಟೋಗ್ರಾಫರ್‌ ಗಳು ಫೋಟೋ ತೆಗೆಯಲೆಂದು ಲಗ್ಗೆ ಇಟ್ಟ ಪರಿಣಾಮ ಗ್ಯಾಲಕ್ಸಿ ಕಪ್ಪೆಗಳ ಆವಾಸಸ್ಥಾನಕ್ಕೆ ಧಕ್ಕೆಯಾಗಿತ್ತು.

ವರ್ತನೆಯಲ್ಲಿನ ಬದಲಾವಣೆಗಳು, ಅವುಗಳ ಆಹಾರ ಸೇವನೆ ಹಾಗೂ ಸಂತಾನೋತ್ಪತ್ತಿಗೆ ಧಕ್ಕೆಯಾಗಿರಬಹುದು ಎಂದು ಅಧ್ಯಯನಕಾರರು ಅಂದಾಜಿಸಿದ್ದಾರೆ.

►ಪುಟ್ಟ ದೇಹದಲ್ಲಿ ಬ್ರಹ್ಮಾಂಡ

ಗ್ಯಾಲಕ್ಸಿ ಕಪ್ಪೆಗಳು ಅಪರೂಪದ ಹಾಗೂ ವಿಶ್ವದ ಅತ್ಯಂತ ಆಕರ್ಷಕ ಉಭಯಚರ ಜೀವಿಗಳಲ್ಲಿ ಒಂದಾಗಿವೆ. ಕೇರಳದ ಪಶ್ಚಿಮ ಘಟ್ಟಗಳ ಕೊಳೆತ ಮರದ ದಿಮ್ಮಿಗಳ ಮೇಲೆ ಇವು ನೆಲೆಸುತ್ತವೆ. ಆದರೆ ಇದೀಗ ಈ ಜೀವಿಗಳು ವಿನಾಶದಂಚಿಗೆ ತಲುಪಿವೆ. ಅಧ್ಯಯನದ ಪ್ರಕಾರ, ಈ ಕಪ್ಪೆಗಳನ್ನು ಮೊತ್ತಮೊದಲ ಬಾರಿಗೆ 1878ರಲ್ಲಿ ಅನ್ವೇಷಿಸಿದ್ದರೂ ಅವು ಜೀವಂತವಾಗಿವೆಯೇ ಇಲ್ಲವೇ ಎಂಬುದು ಬಹುಕಾಲ ತಿಳಿದಿರಲಿಲ್ಲ.

2 ಸೆಂ.ಮೀ. ರಿಂದ 3.5 ಸೆಂ.ಮೀ. ಗಾತ್ರದ ಈ ಕಪ್ಪೆಗಳು ಸದ್ದು ಮಾಡುವುದಿಲ್ಲ. ತಮ್ಮ ಸ್ಥಳವನ್ನು ಬಳಸಿಕೊಂಡು ಸಂವಹನ ಮಾಡುತ್ತವೆ.

ಈ ಕಪ್ಪೆಗಳ ಸಂಖ್ಯೆ ಹಾಗೂ ಸಂತಾನೋತ್ಪತ್ತಿ ವರ್ತನೆಗಳ ಕುರಿತು ಅಧ್ಯಯನಗಳ ಕೊರತೆಯಿದೆ. ಅರಣ್ಯ ಪ್ರದೇಶದ ಒತ್ತುವರಿ, ಉರುವಲು ಸಂಗ್ರಹ ಮತ್ತು ಭೂಕುಸಿತಗಳಿಂದ ಇವುಗಳ ಆವಾಸಸ್ಥಾನ ನಾಶವಾಗುತ್ತಿದೆ. ಹೀಗಾಗಿ ಇತ್ತೀಚಿನ ವರ್ಷಗಳಲ್ಲಿ ಇವುಗಳು ಕಂಡು ಬಂದಿರಲಿಲ್ಲ. ಕೇರಳದ ಮತ್ತಿಕೆಟ್ಟನ್ ಶೋಲಾ ರಾಷ್ಟ್ರೀಯ ಉದ್ಯಾನವನದಲ್ಲಿ ಇವು ಪತ್ತೆಯಾಗಿದ್ದವು. ಆದರೆ ಫೋಟೋ ಪ್ರವಾಸೋದ್ಯಮ ಇವುಗಳ ಆವಾಸಸ್ಥಾನವನ್ನು ಹಾನಿಗೊಳಿಸಿದೆ.

►ಗ್ಯಾಲಕ್ಸಿ ಕಪ್ಪೆಗಳ ಪತ್ತೆ ಮತ್ತು ಕಣ್ಮರೆಯ ಕಥೆ

2020ರ ಮಾರ್ಚ್‌ನಲ್ಲಿ ರಾಜ್‌ಕುಮಾರ್ ಮತ್ತು ಅವರ ತಂಡ ಪಶ್ಚಿಮ ಘಟ್ಟದ ಅರಣ್ಯದಲ್ಲಿ ಏಳು ಗ್ಯಾಲಕ್ಸಿ ಕಪ್ಪೆಗಳನ್ನು ಕೊನೆಯ ಬಾರಿ ನೋಡಿದ್ದರು. ಕೇರಳ ಅರಣ್ಯ ಇಲಾಖೆಯ ಅನುಮತಿಯೊಂದಿಗೆ 2019ರಿಂದಲೇ ಈ ತಂಡ ಕಪ್ಪೆಗಳ ಮೇಲ್ವಿಚಾರಣೆ ನಡೆಸುತ್ತಿತ್ತು. ಆದರೆ ಕೋವಿಡ್ ಸಾಂಕ್ರಾಮಿಕ ರೋಗ ಹರಡಿದ ಬಳಿಕ ಸಂಶೋಧಕರು ಕಪ್ಪೆಗಳ ಬಳಿಗೆ ಹೋಗಲು ಸಾಧ್ಯವಾಗಲಿಲ್ಲ.

ಈ ಅವಧಿಯಲ್ಲಿ ಫೋಟೋಗ್ರಾಫರ್‌ಗಳು ಸ್ಥಳೀಯರನ್ನು ಕರೆದುಕೊಂಡು ಈ ಪ್ರದೇಶಕ್ಕೆ ಭೇಟಿ ನೀಡಿದ್ದು, ಪ್ರಭೇದಗಳ ಹುಡುಕಾಟದಲ್ಲಿ ಆವಾಸಸ್ಥಾನದ ಮರದ ದಿಮ್ಮಿಗಳನ್ನು ಮೇಲೆ ಕೆಳಗೆ ಮಾಡಿದ್ದರು. ಅಂತಿಮವಾಗಿ 2021ರ ಆಗಸ್ಟ್‌ನಲ್ಲಿ ರಾಜ್‌ಕುಮಾರ್ ತಂಡ ಸ್ಥಳಕ್ಕೆ ಭೇಟಿ ನೀಡಿದಾಗ ಮರದ ದಿಮ್ಮಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಆವಾಸಸ್ಥಾನ ನಷ್ಟವಾಗಿರುವುದು ಕಂಡುಬಂದಿತು. ಗ್ಯಾಲಕ್ಸಿ ಕಪ್ಪೆಗಳು ಕಣ್ಮರೆಯಾಗಿದ್ದವು.

ಸ್ಥಳೀಯರ ಪ್ರಕಾರ, ಫೋಟೋಗ್ರಾಫರ್‌ಗಳು ಬರಿಗೈಯಲ್ಲಿ ಕಪ್ಪೆಗಳನ್ನು ಹಿಡಿದು ಉತ್ತಮ ಫೋಟೋಗಳಿಗಾಗಿ ಅವುಗಳನ್ನು ಸ್ಥಳಾಂತರಿಸುತ್ತಿದ್ದರು. ಕ್ಯಾಮೆರಾಗಳ ಬೆಳಕು ಕೂಡ ಕಪ್ಪೆಗಳಿಗೆ ಮರಣಶಾಸನವಾಗಿತ್ತು. ಪ್ರತಿಯೊಬ್ಬರೂ ಕನಿಷ್ಠ ನಾಲ್ಕು ಗಂಟೆಗಳ ಕಾಲ ಫೋಟೋಗಳನ್ನು ತೆಗೆದಿದ್ದರು. ಈ ಫೋಟೋಗ್ರಫಿ ಸಂದರ್ಭದಲ್ಲೇ ಎರಡು ಕಪ್ಪೆಗಳು ಸಾವನ್ನಪ್ಪಿದ್ದವು ಎಂಬ ಮಾಹಿತಿ ರಾಜ್‌ಕುಮಾರ್ ತಂಡಕ್ಕೆ ಲಭಿಸಿದೆ.

ಆದರೆ ಫೋಟೋಗ್ರಫಿಯಿಂದಲೇ ಕಪ್ಪೆಗಳು ಮೃತಪಟ್ಟಿವೆಯೇ ಅಥವಾ ಕಣ್ಮರೆಯಾಗಿವೆಯೇ ಎಂಬುದನ್ನು ದೃಢೀಕರಿಸಲು ತಂಡಕ್ಕೆ ಸಾಧ್ಯವಾಗಲಿಲ್ಲ. ನಂತರವೂ ಸಂಶೋಧಕರು ಕಾಡಿನಲ್ಲಿ ಹುಡುಕಾಟ ನಡೆಸಿದರೂ ಗ್ಯಾಲಕ್ಸಿ ಕಪ್ಪೆಗಳ ದರ್ಶನವಾಗಲಿಲ್ಲ. ಅವುಗಳೆಲ್ಲವೂ ಸತ್ತಿರಬಹುದೆಂದು ಅಂದಾಜಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries