HEALTH TIPS

ಭಾರತದಲ್ಲಿ ನಕಲಿ ರೇಬಿಸ್ ಲಸಿಕೆ? ಆಸ್ಟ್ರೇಲಿಯಾ ಆರೋಗ್ಯ ಇಲಾಖೆಯಿಂದ ಎಚ್ಚರಿಕೆ

ನವದೆಹಲಿ: ಭಾರತ 2030ರ ವೇಳೆಗೆ ರೇಬಿಸ್ (Rabies) ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿ ಹೊಂದಿರುವ ನಡುವೆಯೇ, 2023ರಿಂದ ಭಾರತದಲ್ಲಿ ನಕಲಿ ರೇಬಿಸ್ ಲಸಿಕೆ  ಚಲಾವಣೆಯಲ್ಲಿದೆ ಎಂದು ಆಸ್ಟ್ರೇಲಿಯಾದ ಆರೋಗ್ಯ ಇಲಾಖೆ ಆತಂಕ ವ್ಯಕ್ತಪಡಿಸಿದೆ.

ಅಭಯ್ರಬ್ ಲಸಿಕೆ ಬಗ್ಗೆ ಅನುಮಾನ
ಆಸ್ಟ್ರೇಲಿಯಾ ಆರೋಗ್ಯ ಇಲಾಖೆ ಪ್ರಕಾರ, ಭಾರತದಲ್ಲಿ ಅಭಯ್ರಬ್ (Abhayrab) ಲಸಿಕೆ ಪಡೆದ ಕೆಲವರಿಗೆ ನಕಲಿ ಡೋಸ್ ನೀಡಲ್ಪಟ್ಟಿರಬಹುದೆಂಬ ಅನುಮಾನವಿದೆ. ಹೀಗಾಗಿ ನವೆಂಬರ್ 1, 2023ರಿಂದ ಭಾರತದಲ್ಲಿ ಅಭಯ್ರಬ್ ಡೋಸ್ ಪಡೆದವರು ಮುನ್ನೆಚ್ಚರಿಕೆಯಾಗಿ ಬದಲಿ ಡೋಸ್ ಪಡೆಯುವ ಅಗತ್ಯವಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಸಲಹೆ ನೀಡಿದೆ.

ನಿಜ-ನಕಲಿ ಗುರುತಿಸುವುದು ಕಷ್ಟ:
ಯಾರೊಬ್ಬರು ನಿಜವಾದ ಲಸಿಕೆ ಪಡೆದಿದ್ದಾರೆಯೇ ಅಥವಾ ನಕಲಿ ಲಸಿಕೆ ಪಡೆದಿದ್ದಾರೆಯೇ ಎಂಬುದನ್ನು ಖಚಿತಪಡಿಸುವುದು ಕಷ್ಟಕರವಾಗಿದೆ. ಈ ಕಾರಣದಿಂದಲೇ ಎಲ್ಲರಿಗೂ ಎಚ್ಚರಿಕೆ ವಹಿಸಲು ಆಸ್ಟ್ರೇಲಿಯಾ ಸೂಚಿಸಿದೆ.
ಪ್ರಯಾಣಿಕರಿಗೆ ಮಹತ್ವದ ಸೂಚನೆ. ತರೆ ದೇಶಗಳಲ್ಲಿ ಲಸಿಕೆ ಪಡೆದಿರುವ ಆಸ್ಟ್ರೇಲಿಯಾ ನಾಗರಿಕರು, ಅದರ ದಾಖಲೆಗಳು ಮತ್ತು ವಿವರಗಳನ್ನು ಕಡ್ಡಾಯವಾಗಿ ಉಳಿಸಿಕೊಳ್ಳಬೇಕು. ಆಸ್ಟ್ರೇಲಿಯಾಗೆ ಹಿಂದಿರುಗಿದ ಬಳಿಕ ವೈದ್ಯರೊಂದಿಗೆ ಪರಿಶೀಲಿಸಲು ಇದು ಸಹಕಾರಿಯಾಗುತ್ತದೆ. ಆಸ್ಟ್ರೇಲಿಯಾದಲ್ಲಿ ಅಭಯ್ರಬ್ ಲಸಿಕೆ ಬಳಕೆಯಲ್ಲಿಲ್ಲದ ಕಾರಣ ಈ ಎಚ್ಚರಿಕೆ ನೀಡಲಾಗಿದೆ.

IIL ಕಂಪನಿಯ ಸ್ಪಷ್ಟನೆ
ಅಭಯ್ರಬ್ ಲಸಿಕೆ ತಯಾರಿಸುವ ಪ್ರಮುಖ ಸಂಸ್ಥೆಯಾದ ಇಂಡಿಯನ್ ಇಮ್ಯುನೊಲಾಜಿಕಲ್ಸ್ ಲಿಮಿಟೆಡ್ (IIL), ನಕಲಿ ಲಸಿಕೆ ಚಲಾವಣೆಯಲ್ಲಿದೆ ಎಂಬ ಆರೋಪವನ್ನು ನಿರಾಕರಿಸಿದೆ.
ಆದರೆ ಆಸ್ಟ್ರೇಲಿಯಾ ನೀಡಿರುವ ಸಲಹೆಯನ್ನು ಪರಿಷ್ಕರಿಸುವಂತೆ ಅಲ್ಲಿನ ಆರೋಗ್ಯ ಅಧಿಕಾರಿಗಳಿಗೆ ಪತ್ರ ಬರೆದಿರುವುದಾಗಿ ತಿಳಿಸಿದೆ.

ನಕಲಿ ಲೇಬಲ್ ಬಗ್ಗೆ ಎಚ್ಚರಿಕೆ
ಔಷಧ ನಿಯಂತ್ರಣ ಸಂಸ್ಥೆಯ ಪ್ರಕಾರ, ನಕಲಿ ಲಸಿಕೆಯನ್ನು IIL ಉತ್ಪನ್ನವೆಂದು ತಪ್ಪಾಗಿ ಲೇಬಲ್ ಮಾಡಿ ಮಾರಾಟ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ KA24014 ಬ್ಯಾಚ್ ಸಂಖ್ಯೆಯ ಕೆಲವು ಲಸಿಕೆ ಬಾಟಲ್‌ಗಳನ್ನು ಮಾರುಕಟ್ಟೆಯಿಂದ ವಾಪಸ್ ಪಡೆಯಲಾಗಿದೆ.

ನಕಲಿ ಲಸಿಕೆಯಿಂದಾಗುವ ಅಪಾಯ:
ಅಭಯ್ರಬ್ ರೇಬಿಸ್ ತಡೆಯುವ ಅತ್ಯಂತ ಪ್ರಮುಖ ಲಸಿಕೆ. ನಕಲಿ ಲಸಿಕೆ ನೀಡಿದರೆ ರೋಗಿಗಳಿಗೆ ಜೀವಾಪಾಯ ಉಂಟಾಗುವ ಸಾಧ್ಯತೆ ಇದ್ದು, ಇದು ಅತ್ಯಂತ ಗಂಭೀರ ವಿಷಯವಾಗಿದೆ.

ಕಂಪನಿಯ ಹಿನ್ನೆಲೆ"

IIL ಸಂಸ್ಥೆ 2000ರಿಂದ ಅಭಯ್ರಬ್ ಲಸಿಕೆ ತಯಾರಿಸುತ್ತಿದ್ದು, ಭಾರತ ಹಾಗೂ 40ಕ್ಕೂ ಹೆಚ್ಚು ದೇಶಗಳಲ್ಲಿ 210 ಮಿಲಿಯನ್‌ಗಿಂತ ಹೆಚ್ಚು ಡೋಸ್‌ಗಳನ್ನು ಪೂರೈಸಿದೆ.nಭಾರತದಲ್ಲಿ ಈ ಲಸಿಕೆಯ 40% ಮಾರುಕಟ್ಟೆ ಪಾಲು IILದದ್ದಾಗಿದೆ.
ಸರ್ಕಾರದ ಗುಣಮಟ್ಟ ಭರವಸೆ IIL ಉಪಾಧ್ಯಕ್ಷ ಹಾಗೂ ಗುಣಮಟ್ಟ ನಿರ್ವಹಣಾ ಮುಖ್ಯಸ್ಥ ಸುನಿಲ್ ತಿವಾರಿ ಮಾತನಾಡಿ,
ಭಾರತದಲ್ಲಿ ತಯಾರಾಗುವ ಪ್ರತಿಯೊಂದು ಲಸಿಕೆಯನ್ನು ಮಾರಾಟಕ್ಕೆ ಮೊದಲು ಕೇಂದ್ರ ಔಷಧ ಪ್ರಯೋಗಾಲಯ (ಭಾರತ ಸರ್ಕಾರ) ಪರೀಕ್ಷಿಸುತ್ತದೆ ಎಂದರು.

ಸರ್ಕಾರಿ ಸಂಸ್ಥೆಗಳು ಹಾಗೂ ಅಧಿಕೃತ ವಿತರಕರ ಮೂಲಕ ಪೂರೈಕೆಯಾಗುವ ಲಸಿಕೆಗಳು ಸಂಪೂರ್ಣ ಸುರಕ್ಷಿತ ಮತ್ತು ಗುಣಮಟ್ಟದವು ಎಂದು ಸ್ಪಷ್ಟಪಡಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries