ಕೊಟ್ಟಾಯಂ: ವಾಹನಗಳು ರೈಲ್ವೆ ಹಳಿ ಪ್ರವೇಶಿಸಿದಾಗ ಅಪಘಾತಗಳು ಸಂಭವಿಸುತ್ತಿರುವುದು ಹೆಚ್ಚಳಗೊಳ್ಳುತ್ತಿದೆ. ಭದ್ರತೆಯನ್ನು ಬಲಪಡಿಸಲು ರೈಲ್ವೆ ಸಿದ್ಧತೆ ನಡೆಸುತ್ತಿದೆ. ರೈಲ್ವೆ ಹಳಿಯಲ್ಲಿ ಚಲಿಸುವ ಕಾರು ಮತ್ತು ಹಳಿಯಲ್ಲಿ ಚಲಿಸುವ ಆಟೋರಿಕ್ಷಾಗೆ ರೈಲು ಡಿಕ್ಕಿ ಹೊಡೆದ ಸುದ್ದಿಗಳು ನಿರಂತರವಾಗಿ ಪುನರಾವರ್ತನೆಯಾಗುತ್ತಿರುವುದರಿಂದ, ರೈಲ್ವೆ ಪ್ರಬಲ ನಿಯಂತ್ರಣ ಕ್ರಮಕ್ಕೆ ಸಿದ್ಧತೆ ನಡೆಸುತ್ತಿದೆ. ಅಪಘಾತಗಳಿಗೆ ಒಳಗಾಗುವ ಪ್ರದೇಶಗಳಲ್ಲಿ ತಡೆಗೋಡೆಗಳನ್ನು ಹಾಕಲು ಆರ್‍ಪಿಎಫ್ ನಿರ್ಧರಿಸಿದೆ. ಅಂತಹ ಸ್ಥಳಗಳನ್ನು ಈಗ ಗುರುತಿಸಲಾಗುತ್ತಿದೆ.
ಡಿಸೆಂಬರ್ 23 ರಂದು, ವರ್ಕಲಾದಲ್ಲಿ ವಂದೇ ಭಾರತ್ ರೈಲು ಆಟೋಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಆಟೋ ಹಳಿಯಲ್ಲಿ ಉರುಳಿದ ತಕ್ಷಣ ಕುಡಿದ ಮತ್ತಿನಲ್ಲಿದ್ದ ಚಾಲಕ ಪರಾರಿಯಾಗಿದ್ದ, ಆದರೆ ನಂತರ ಪೆÇಲೀಸರು ಆತನನ್ನು ಬಂಧಿಸಿದರು.
ಇದರಿಂದಾಗಿ ವಂದೇ ಭಾರತ್ ಸೇರಿದಂತೆ ಸೇವೆಗಳು ಒಂದು ಗಂಟೆಗೂ ಹೆಚ್ಚು ಕಾಲ ಸ್ಥಗಿತಗೊಂಡವು. ನಿಯಂತ್ರಣ ತಪ್ಪಿ ಪ್ಲಾಟ್‍ಫಾರ್ಮ್‍ಗೆ ಡಿಕ್ಕಿ ಹೊಡೆದ ಆಟೋ ಹಳಿಯ ಮೇಲೆ ಬಿದ್ದು ಅದೇ ಸಮಯದಲ್ಲಿ ಕಾಸರಗೋಡಿನಿಂದ ತಿರುವನಂತಪುರಕ್ಕೆ ಹೋಗುತ್ತಿದ್ದ ವಂದೇ ಭಾರತ್ ಆಟೋಗೆ ಡಿಕ್ಕಿ ಹೊಡೆದಿತ್ತು.

