ಸಮರಸ ಚಿತ್ರಸುದ್ದಿ: ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯಿತಿ ಒಂದನೇ ವಾರ್ಡು ಮಜಿರ್ಪಳ್ಳಕಟ್ಟೆ ಅಂಗನವಾಡಿಯಲ್ಲಿ ರಾಷ್ಟ್ರೀಯ ಜಂತುಹುಳ ವಿಮುಕ್ತ ದಿನಾಚರಣೆಯ ಅಂಗವಾಗಿ ಮಕ್ಕಳಿಗೆ ಜಂತು ಹುಳ ನಿವಾರಣಾ ಮಾತ್ರೆಗಳನ್ನು ನೀಡಲಾಯಿತು. ಗ್ರಾಮಪಂಚಾಯಿತಿ ಸದಸ್ಯ ಹರೀಶ ಎ ಉದ್ಘಾಟಿಸಿದರು. ಆರೋಗ್ಯ ಕೇಂದ್ರದ ರೇಖ ಮಾಹಿತಿ ನೀಡಿದರು. ಗ್ರಾಮಪಂಚಾಯಿತಿ ಸದಸ್ಯೆ ಬಿಂದ್ಯಾ, ಶಿಕ್ಷಕಿ ದೇವಕಿ, ಸಹಾಯಕಿ ಸುಶೀಲ, ಆಶಾ ಕಾರ್ಯಕರ್ತೆ ಪ್ರೀಜ ಮತ್ತು ಮಾತೆಯರು ಉಪಸ್ಥಿತರಿದ್ದರು.

.jpg)
