ಕಾಸರಗೋಡು: ಜಿಲ್ಲೆಯ ಅರೆ ಸರ್ಕಾರಿ ಸಂಸ್ಥೆಯೊಂದರಲ್ಲಿ ಮೆಕ್ಯಾನಿಕ್ ಹುದ್ದೆಗೆ ಎರಡು ತಾತ್ಕಾಲಿಕ ಹುದ್ದೆಗಳು ತೆರವಾಗಿದ್ದು, ಅಬ್ಯರ್ಥಿಗಳು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ತಮ್ಮ ಹೆಸರುನೋಂದಾಯಿಸಿಕೊಲ್ಳುವಂತೆ ಸೂಚಿಸಲಾಗಿದೆ.
ಅಬ್ಯರ್ಥಿಗಳಿಗೆ ಟೆಕ್ನಿಷಿಯನ್ ಮೆಕಾಟ್ರಾನಿಕ್ಸ್ ಮೆಕ್ಯಾನಿಕ್, ಮೆಕ್ಯಾನಿಕ್ ಆಟೋ ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಅರ್ಹತೆಯೊಂದಿಗೆ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ ಎರಡು ವರ್ಷಗಳ ಕೆಲಸದ ಅನುಭವ ಹೊಂದಿರಬೇಕು. 25 ರಿಂದ 45 ವರ್ಷ ವಯಸ್ಸಿನ ಮಿತಿಯಾಗಿದೆ. ನಿರ್ದಿಷ್ಟ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಜನವರಿ 24 ರ ಮೊದಲು ಮೂಲ ಪ್ರಮಾಣಪತ್ರಗಳೊಂದಿಗೆ ಸಂಬಂಧಿತ ಉದ್ಯೋಗ ವಿನಿಮಯ ಕಚೇರಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ 04994-255582 ಸಂಖ್ಯೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

