HEALTH TIPS

ʼʼತುಂಬ ಹೊತ್ತಿನಿಂದ ನಿಂತಿದ್ದಿ, ಸುಸ್ತಾಗಿರುತ್ತೆ....ʼʼ; ಅರ್ಧಕ್ಕೆ ಭಾಷಣ ನಿಲ್ಲಿಸಿ ಪೈಟಿಂಗ್‌ ಹಿಡಿದ ಬಾಲಕನ ಜತೆ ಮಾತನಾಡಿದ ಪ್ರಧಾನಿ ಮೋದಿ

ತಿರುವನಂತಪುರಂ: ಪ್ರಧಾನಿ ನರೇಂದ್ರ ಮೋದಿ  ವಿಶ್ವದ ಪ್ರಭಾವಿ ನಾಯಕರಲ್ಲಿ ಒಬ್ಬರು. ಯಶಸ್ವಿ ರಾಜಕಾರಣಿ ಎನಿಸಿಕೊಂಡಿರುವ ಅವರಿಗೆ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಅಭಿಮಾನಿಗಳಿದ್ದಾರೆ. ಇಡೀ ವಿಶ್ವವೇ ಭಾರತದ ಕಡೆಗೆ ತಿರುಗಿ ನೋಡುವಂತೆ ಮಾಡಿದ್ದಾರೆ.

ಮೋದಿ ಶುಕ್ರವಾರ ಕೇರಳಕ್ಕೆ ಆಗಮಿಸಿದ ವೇಳೆ ಅಪರೂಪದ ಘಟನೆಯೊಂದು ನಡೆಯಿತು. ತಿರುವನಂತಪುರಂನಲ್ಲಿ ಆಯೋಜಿಸಿದ್ದ ಬೃಹತ್‌ ರ‍್ಯಾಲಿಯಲ್ಲಿ ಅವರು ಪಾಲ್ಗೊಂಡರು. ಈ ಸಮಾವೇಶದಲ್ಲಿ ಪ್ರಧಾನಿ ಮೋದಿ ತಮ್ಮ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿ ಪುಟ್ಟ ಬಾಲಕನೊಬ್ಬನ ಜತೆ ಸಂವಹನ ನಡೆಸಿದರು. ಸದ್ಯ ಅಪರೂಪದ ಕ್ಷಣದ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ಈ ಸಮಾವೇಶದಲ್ಲಿ ಭಾಗವಹಿಸಿದ ಬಾಲಕ ನೀಲಿ ಸೂಟ್ ಮತ್ತು ಬಹು ಬಣ್ಣದ ಪೇಟದಲ್ಲಿರುವ ಮೋದಿಯ ಚಿತ್ರವನ್ನು ಬಿಡಿಸಿ ಅದನ್ನು ಪ್ರದರ್ಶಿಸುತ್ತಿದ್ದ. ತುಂಬ ಹೊತ್ತು ಆ ಬಾಲಕ ತನ್ನ ಚಿತ್ರವನ್ನು ಕೈಯಲ್ಲಿ ಹಿಡಿದುಕೊಂಡು ನಿಂತಿರುವುದನ್ನು ಗಮನಿಸಿದ ಮೋದಿ ಆತನ ಮಾತನಾಡಿದರು.

ವಿಡಿಯೊ ನೋಡಿ:

#WATCH | Thiruvananthapuram, Kerala: At a BJP rally, PM Narendra Modi tells a young boy, "I have been seeing a child standing for long with his hands up in the air. You will get tired. Bring me the picture, write your address on the back, I will write to you. I urge the SPG to Show more
1K
Reply
Copy link

ʼʼನೀನು ತುಂಬ ಸಮಯದಿಂದ ನಿಂತಿದ್ದಿ. ಸುಸ್ತಾಗಿರುತ್ತದೆ. ಆ ಚಿತ್ರದ ಹಿಂದೆ ಹೆಸರು, ವಿಳಾಸ ಬರೆದು ಕೊಡು. ನಾನು ನಿನಗೆ ಪತ್ರ ಬರೆಯುತ್ತೇನೆʼʼ ಎಂದು ಮೋದಿ‌ ಹೇಳಿದ್ದಾರೆ.‌ ಬಳಿಕ ವಿಶೇಷ ರಕ್ಷಣಾ ಗುಂಪು (ಎಸ್‌ಪಿಜಿ) ಸಿಬ್ಬಂದಿಗೆ ಚಿತ್ರವನ್ನು ಪಡೆಯುವಂತೆ ಅವರು ಸೂಚಿಸಿದ್ದಾರೆ. ''ಇದು ಈ ಮಗುವಿನ ಪ್ರೀತಿ ಮತ್ತು ಆಶೀರ್ವಾದಗಳನ್ನು ಹೊಂದಿದೆ. ದಯವಿಟ್ಟು ಅದನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ" ಎಂದು ಪ್ರಧಾನಿ ಭಾಷಣ ಮಧ್ಯೆಯೇ ಹೇಳಿದ್ದಾರೆ.

ಸದ್ಯ ಈ ದೃಶ್ಯ ವೈರಲ್ ಆಗಿದ್ದು ಪ್ರಧಾನಿ ನಡೆಗೆ ಹಲವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ನೆಟ್ಟಿಗರೊಬ್ಬರು ಇಂತಹ ಪ್ರಧಾನಿ ಬಗ್ಗೆ ಹೆಮ್ಮೆ ಎನಿಸುತ್ತಿದೆ ಎಂದಿದ್ದಾರೆ. ಮಗುವನ್ನು ಗಮನಿಸಿದ ಮೋದಿ ನಿಜವಾಗಿಯೂ ಈ ಪ್ರೀತಿಗೆ ಪಾತ್ರರು ಎಂದು ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries