ನವದೆಹಲಿ: 78ನೇ ಭಾರತೀಯ ಸೇನಾ ದಿನದ ಅಂಗವಾಗಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ಸಮಯದ ಹಾಗೂ ಭಾರತೀಯ ಸೇನೆಯ ಶಕ್ತಿಯನ್ನು ವಿವರಿಸುವ ವಿಡಿಯೊವೊಂದನ್ನು ಸೇನೆ ಬಿಡುಗಡೆ ಮಾಡಿದೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಭಯೋತ್ಪಾದಕರ ಮೂಲಸೌಕರ್ಯಗಳನ್ನು ನಾಶಮಾಡಲು ನಡೆಸಲಾದ ಆಪರೇಷನ್ ಸಿಂಧೂರದ ಹೈಲೈಟ್ ಕೂಡ ವಿಡಿಯೊದಲ್ಲಿದೆ.
ಪಾಕ್ ವಿರುದ್ಧ ದಾಳಿಗೆ ಹೇಗೆ ಸೇನೆ ಸಿದ್ಧತೆ ನಡೆಸಿತು ಮತ್ತು ಕಾರ್ಯಾಚರಣೆಯನ್ನು ಹೇಗೆ ನಡೆಸಿತು ಎಂಬುದನ್ನು ವಿಡಿಯೊದಲ್ಲಿ ತೋರಿಸಲಾಗಿದೆ.
ರಾಜಸ್ಥಾನದ ಜೈಪುರದಲ್ಲಿ ನಡೆದ ಭಾರತೀಯ ಸೇನೆಯ ಪರೇಡ್‌ನಲ್ಲಿ ವಿಡಿಯೊ ಪ್ರದರ್ಶನಗೊಂಡಿದೆ. ಅದೇ ವಿಡಿಯೊವನ್ನು ಭಾರತೀಯ ಸೇನೆಯ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಎಂಟು ನಿಮಿಷಗಳ ವಿಡಿಯೊ ಇದಾಗಿದೆ.
#ArmyDay 2026#भारतीयसेना: स्वदेशीकरण से सशक्तिकरण#ArmyDayParade, #जयपुर में प्रदर्शित भारतीय सेना की प्रेरणादायक फिल्म देखें।
— ADG PI - INDIAN ARMY (@adgpi) January 15, 2026
अडिग संकल्प, आत्मनिर्भरता और अत्याधुनिक तकनीकी समाधानों के साथ भारतीय सेना राष्ट्र की सुरक्षा और प्रगति का सशक्त आधारस्तंभ है। बाहरी आक्रमणों से लेकर… pic.twitter.com/sh1pho8MZ3
'ಅಚಲವಾದ ಸಂಕಲ್ಪ, ಸ್ವಾವಲಂಬನೆ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ, ಭಾರತೀಯ ಸೇನೆಯು ರಾಷ್ಟ್ರದ ಭದ್ರತೆ ಮತ್ತು ಪ್ರಗತಿಯ ದೃಢವಾದ ಆಧಾರಸ್ತಂಭವಾಗಿ ನಿಂತಿದೆ. ಬಾಹ್ಯ ಆಕ್ರಮಣಗಳ ವಿರುದ್ಧ ರಕ್ಷಿಸುವುದರಿಂದ ಹಿಡಿದು ಆಂತರಿಕ ಸವಾಲುಗಳನ್ನು ಎದುರಿಸುವವರೆಗೆ ಮತ್ತು ವಿಪತ್ತು ಪರಿಹಾರದಿಂದ ರಾಷ್ಟ್ರ ನಿರ್ಮಾಣದವರೆಗೆ, ತ್ಯಾಗ, ಶಿಸ್ತು ಮತ್ತು ಅದಮ್ಯ ಧೈರ್ಯದಿಂದ ನಮ್ಮ ಸೈನಿಕರು ದೇಶವನ್ನು ರಕ್ಷಿಸುತ್ತಾರೆ' ಎಂದು ಭಾರತೀಯ ಸೇನೆಯು 'ಎಕ್ಸ್'ನಲ್ಲಿ ಬರೆದುಕೊಂಡಿದೆ.
'ವಿಕಸಿತ ಭಾರತ 2047ರ ಅಡಿಯಲ್ಲಿ ದೇಶವು ಅಭಿವೃದ್ಧಿಯತ್ತ ಹೆಜ್ಜೆ ಹಾಕುತ್ತಿರುವಾಗ, ಭಾರತೀಯ ಸೇನೆಯು ಸುರಕ್ಷಿತ, ಸ್ಥಿರ ಮತ್ತು ಆತ್ಮವಿಶ್ವಾಸದ ವಾತಾವರಣವನ್ನು ನಿರ್ಮಿಸುವ ಮೂಲಕ ದೇಶದ ಒಟ್ಟಾರೆ ಅಭಿವೃದ್ಧಿ ಮತ್ತು ಪ್ರಗತಿಗೆ ತನ್ನ ಪ್ರಮುಖ ಕೊಡುಗೆಯನ್ನು ನೀಡುತ್ತಲೇ ಇದೆ' ಎಂದು ಹೇಳಿದೆ.
'ಕಾರ್ಯಾಚರಣೆ ವೇಳೆ ಭಾರತ ನಿಖರವಾಗಿ ಪ್ರತಿಕ್ರಿಯಿಸಿದೆ. ಭಾರತವು ಪ್ರತೀಕಾರವನ್ನಲ್ಲ, ನ್ಯಾಯವನ್ನು ಬಯಸುತ್ತದೆ ಎಂಬುದನ್ನು ಆಪರೇಷನ್ ಸಿಂಧೂರ ತಿಳಿಯಪಡಿಸಿದೆ' ಎಂದು ವಿಡಿಯೊದಲ್ಲಿ ವಿವರಿಸಲಾಗಿದೆ.

