ಕುಂಬಳೆ: ಕಾರ್ಕಳ ನಂದಳಿಕೆಯ ವಿಶಾಲ ಯಕ್ಷ ಬಳಗದವರಿಂದ ನಾಯ್ಕಾಪು ವಿಜಯಲಕ್ಷ್ಮೀ ಭಟ್ ಮಜಲು ಅವರ ಗೃಹದಲ್ಲಿ ಸೋಮವಾರ ಶನೈಶ್ಚರ ಮಹಾತ್ಮ್ಯೆ ಯಕ್ಷಗಾನ ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ಗಣೇಶ ಮಯ್ಯ, ವಾಸುದೇವ ಮಯ್ಯ ವರ್ಕಾಡಿ(ಭಾಗವತರು), ನಟರಾಜ ಕಲ್ಲೂರಾಯ ಮಧೂರು(ಚೆಂಡೆ), ಕೃಷ್ಣಮೂರ್ತಿ ಪಾಡಿ(ಮೃದಂಗ)ದಲ್ಲಿ ಸಹಕರಿಸಿದರು. ಮುಮ್ಮೇಳದಲ್ಲಿ ಉದಯಶಂಕರ ಮಜಲು(ವಿಕ್ರಮಾಧಿತ್ಯ). ಅಶೋಕ ಕುಂಬಳೆ(ಶನೈಶ್ಚರ). ಸುಬ್ರಹ್ಮಣ್ಯ ಬೈಪಡಿತ್ತಾಯ ಕಾರ್ಕಳ(ನಂದಿ ಶೆಟ್ಟಿ), ಪುರುಷೋತ್ತಮ ಭಟ್.ಕೆ(ಚಂದ್ರಸೇನ), ಸದಾಶಿವ ಮುಳಿಯಡ್ಕ(ರಾಮ ಗಾಣಿಗ) ಪಾತ್ರಗಳನ್ನು ನಿರ್ವಹಿಸಿದರು. ಉದಯ ಮಜಲು ಸ್ವಾಗತಿಸಿ, ವಿಜಯಲಕ್ಷ್ಮೀ ಮಜಲು ವಂದಿಸಿದರು.

.jpg)
