ಮಂಜೇಶ್ವರ: ಆನೆಕಲ್ಲು ಛತ್ರ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಮಲಬಾರ್ ದೇವಸ್ವಂ ಬೋರ್ಡಿನ ಸದಸ್ಯ ಶಂಕರ್ ಆದೂರು ಬಿಡುಗಡೆಗೊಳಿಸಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ಕೃಷ್ಣ ನಾಯ್ಕ್ ಸೊಡಂಕೂರು ಅಧ್ಯಕ್ಷತೆ ವಹಿಸಿದ್ದರು.
ಕ್ಷೇತ್ರ ಪವಿತ್ರಪಾಣಿ ಮಹಾಲಿಂಗೇಶ್ವರ ಭಟ್ ಪಾರೆಕುಂಡಡ್ಕ, ದೇವಸ್ಥಾನದ ಪ್ರಧಾನ ಅರ್ಚಕ ವಿಷ್ಣು ಪ್ರಸಾದ್ ಭಟ್ ಪಜ್ವ, ಸೇವಾ ಸಮಿತಿಯ ಅಧ್ಯಕ್ಷ ಎನ್.ಟಿ. ರೈ ಸೇನ್ಯ ಕಲ್ಲಾಡಿಗುತ್ತು, ಮೀಂಜ ಪಂಚಾಯತಿ ಮಾಜಿ ಸದಸ್ಯ ಬಾಬು ಕುಳೂರು, ಮೊಕ್ತೇಸರ ವೆಂಕಟ್ರಾಜ ರೈ ನಾಣಿಲ್ತಡಿ, ಸತ್ಯನಾರಾಯಣ ಭಟ್ ಪಜ್ವ, ರವೀಂದ್ರ ಶೆಟ್ಟಿ ಕೊಡ್ಲಮೊಗರು, ಗಿರಿಯಪ್ಪ ನಾಯ್ಕ್ ಕತ್ತರಿಕೋಡಿ, ಮಾತೃಮಂಡಳಿಯ ಅಧ್ಯಕ್ಷೆ ಮಮತ ಮುಗುಳಿ, ಸೇವಾ ಸಮಿತಿಯ ಮಾಜಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಪಿಲಿಕುಂಡ, ಯಕ್ಷಗಾನ ತರಬೇತಿಯ ಸಂಚಾಲಕಿ ಉಷಾ ಕಜೆ, ಸೇವಾ ಸಮಿತಿಯ ಕೋಶಾಧಿಕಾರಿ ಐತ್ತಪ್ಪ ಮಾಸ್ತರ್ ಸೊಡಂಕೂರು, ಹಿರಿಯರಾದ ಮಹಾಲಿಂಗ ಭಟ್ ಪಜ್ವ, ಶ್ರೀನಿವಾಸ ನಾಯ್ಕ್ ಆನೆಕಲ್ಲು ಹಾಗೂ ವಿವಿಧ ಸಮಿತಿಗಳ ಸದಸ್ಯರು ಉಪಸ್ಥಿತರಿದ್ದರು. ಇತ್ತೀಚೆಗೆ ನಿಧನರಾದ ಸೇವಾಸಮಿತಿಯ ಸಕ್ರಿಯ ಕಾರ್ಯಕರ್ತ ಗೋಪಾಲ ಮಾಸ್ತರ್ ಆನೆಕಲ್ಲು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ನಡೆಸುವ ನಿಟ್ಟಿನಲ್ಲಿ ಚರ್ಚಿಸಿ ತೀರ್ಮಾನಿಸಲಾಯಿತು. ಸೇವಾ ಸಮಿತಿಯ ಕಾರ್ಯದರ್ಶಿ ಕಾರ್ತೀಶ್ ನಾಣಿಲ್ತಡಿ ಸ್ವಾಗತಿಸಿ, ವಂದಿಸಿದರು.

.jpg)
