ಕಾಸರಗೋಡು: ಮಾಲಿಕ್ ದೀನಾರ್ ಕಲ್ಚರಲ್ ಪೋರಂ ನೀಡುವ ಏಳನೇ ವರ್ಷದ ಸಯ್ಯದ್ ತ್ವಾಹಿರುಲ್ ಅಹ್ದಲ್ ಸ್ಮಾರಕ ಪ್ರಶಸ್ತಿಗೆ ಕೇರಳ ಮುಸ್ಲಿಂ ಜಮಾಅತ್ ಕಾಸರಗೋಡ್ ಜಿಲ್ಲಾ ಜನರಲ್ ಸೆಕ್ರಟರಿಯೂ, ಸುನ್ನಿ ಚಳವಳಿಯ ಪ್ರಮುಖ ನಾಯಕ ಪಳ್ಳಂಗೋಡು ಅಬ್ದುಲ್ ಖಾದಿರ್ ಮದನಿ ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನವನ್ನು ಪುತ್ತಿಗೆ ಮುಹಿಮ್ಮಾತ್‍ನಲ್ಲಿ ನಡೆಯುವ ತ್ವಾಹಿರ್ ತಙಳ್ ಅವರ 20ನೇ ಉರುಸ್ ಮುಬಾರಕ್ ಕಾರ್ಯಕ್ರಮದಲ್ಲಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಾಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರು ಪ್ರದಾನ ಮಾಡಲಿದ್ದಾರೆ.
ವಿವಿಧ ದೇಶಗಳಲ್ಲಿ ಉದ್ಯೋಗದಲ್ಲಿರುವ ಕಾಸರಗೋಡ್ ಜಿಲ್ಲೆಯವರ ಒಕ್ಕೂಟವಾಗಿರುವ ಮಾಲಿಕ್ ದೀನಾರ್ ಕಲ್ಚರಲ್ ಫೆÇೀರಂ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಂಸ್ಕøತಿಕ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದವರಿಗೆ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಗಲ್ ಅವರ ಸ್ಮರಣಾರ್ಥವಾಗಿ ಕಳೆದ ಆರು ವರ್ಷಗಳಿಂದ ಈ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ.
ಪಳ್ಳಂಗೋಡ್ ಅಬ್ದುಲ್ ಖಾದಿರ್ ಮದನಿ ಅವರು 1986ರಿಂದ ಎಸ್‍ಎಸ್‍ಎಫ್ ಹಾಗೂ ಎಸ್‍ವೈಎಸ್ ಸಂಘಟನೆಗಳಲ್ಲಿ ಘಟಕ ಮಟ್ಟದಿಂದ ರಾಜ್ಯ ಮಟ್ಟದವರೆಗೆ ವಿವಿಧ ಜವಾಬ್ದಾರಿ ನಿರ್ವಹಿಸಿರುವ ಇವರು ಪ್ರಸಕ್ತ ಕೇರಳ ಮುಸ್ಲಿಂ ಜಮಾಅತ್ ಜಿಲ್ಲಾ ಜನರಲ್ ಸೆಕ್ರಟರಿ, ಸಅದಿಯ್ಯ ಕ್ಯಾಬಿನೆಟ್ ಸದಸ್ಯ, ಮುಹಿಮ್ಮಾತ್ ಉಪಾಧ್ಯಕ್ಷ, ಮಲ್‍ಹರ್ ಸೆಕ್ರಟರಿ, ಕಲ್ಲಕಟ್ಟ ಮಜ್ಮಹ್ ಹಾಗೂ ಮದನೀಸ್ ಅಸೋಸಿಯೇಶನ್ ಪದಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.


