ಕಾಸರಗೋಡು: ಕಾಞಂಗಾಡಿನ ಜಿಲ್ಲಾಸ್ಪತ್ರೆಯ 'ಆದ್ರ್ರಂ ಮಿಷನ್ ಅಧೀನದಲ್ಲಿರುವ ಕಟ್ಟಡದೊಳಗಿನ ಗಾಲಿಕುರ್ಚಿಯಲ್ಲಿ ಭಾರಿ ಗಾತ್ರದ ಹೆಬ್ಬಾವು ಕಂಡುಬಂದಿದ್ದು, ಆಸ್ಪತ್ರೆ ಸಿಬ್ಬಂದಿ ಮತ್ತು ರೋಗಿಗಳನ್ನು ಆತಂಕಕ್ಕೆ ತಳ್ಳುವಂತೆ ಮಾಡಿದೆ.
ಕರ್ತವ್ಯದಲ್ಲಿದ್ದ ದಾದಿಯೊಬ್ಬರು ಗಾಲಿಕುರ್ಚಿಯಲ್ಲಿ ಸುತ್ತಿದ್ದ ಹೆಬ್ಬಾವನ್ನು ಕಂಡು ಮಾಹಿತಿ ನೀಡಿದ್ದಾರೆ. ತಕ್ಷಣ ಶುಚೀಕರಣ ವಿಭಾಗ ಸಿಬ್ಬಂದಿ ಚೆಮ್ಮಟ್ಟಂವಯಲ್ ನಿವಾಸಿ ಅರುಣ್‍ಕುಮಾರ್ ಎಂಬವರು ಹೆಬ್ಬಾವನ್ನು ಸೆರೆಹಿಡಿದು, ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಮೂಲಕ ಆಸ್ಪತ್ರೆ ಸಿಬ್ಬಂದಿ, ರೋಗಿಗಳ ಆತಂಕ ದೂರ ಮಾಡಿದ್ದಾರೆ. ಕಟ್ಟಡ ಸನಿಹದ ಕುರುಚಲು ಕಾಡಿನಿಂದ ಹೆಬ್ಬಾವು ಆಗಮಿಸಿರುವುದಾಗಿ ಸಂಶಯಿಸಲಾಗಿದೆ.

