ಮಂಜೇಶ್ವರ: ಮಂಗಳೂರಿನಿಂದ ಕಾಸರಗೋಡಿಗೆ ಸಂಚರಿಸುತ್ತಿದ್ದ ಕೆಎಸ್ಸಾರ್ಟೀಸಿ ಬಸ್ಸಿನಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ 30ಲಕ್ಷ ರೂ. ನಗದು ಮಂಜೇಶ್ವರ ಅಬಕಾರಿ ಚೆಕ್‍ಪೋಸ್ಟ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಮಲಪ್ಪುರಂ ಪೆರಿಂದಲ್‍ಮಣ್ಣ ವಡಕ್ಕಾಂಕರ ನಿವಾಸಿ ಹಂಸ(64) ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಹಾಗೂ ವಶ ಪಡಿಸಿದ ಮೊತ್ತವನ್ನು ನಂತರ ಮಂಜೇಶ್ವರ ಠಾನೆ ಪೆÇಲೀಸರಿಗೆ ಹಸ್ತಾಂತರಿಸಲಾಗಿದೆ. ಮಂಜೇಶ್ವರ ಚೆಕ್ ಪೆÇೀಸ್ಟಿನಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಮಂಗಳೂರು-ಕಾಸರಗೋಡು ರೂಟಲ್ಲಿ ಬಸ್ ಮೂಲಕ ಕಾಳಧನ ಸಾಗಾಟ ವ್ಯಾಪಕವಾಗಿದ್ದು, ಅನಧಿಕೃತ ಮದ್ಯ ಸಾಗಾಟ ತಡೆಗಟ್ಟುವ ನಿಟ್ಟಿನಲ್ಲಿ ಅಬಕಾರಿ ದಳ ಚೆಕ್ ಪೆÇೀಸ್ಟ್ ನಲ್ಲಿ ನಡೆಸುವ ತಪಾಸಣೆಯಲ್ಲಿ ಲಕ್ಷಾಂತರ ರೂ. ನಗದು ವಶಪಡಿಸಿಕೊಂಡು, ಹಲವರನ್ನು ಬಂಧಿಸಲಾಗಿದೆ.

